ಜಾಮ್ ಎಂದರೆ ಮಕ್ಕಳ ಕಣ್ಣು ಅರಳುತ್ತದೆ. ದೋಸೆ, ಚಪಾತಿ ಮಾಡಿದಾಗ ಜಾಮ್ ಜತೆ ನೆಂಚಿಕೊಂಡು ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇಲ್ಲಿ ರಸ್ಬೆರಿ ಹಣ್ಣಿನ ಜಾಮ್ ಮಾಡುವ ವಿಧಾನ ಇದೆ ನೋಡಿ. ಈ ಹಣ್ಣು ನಿಮಗೆ ಹಣ್ಣಿನ ಅಂಗಡಿ ಅಥವಾ ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತದೆ.
1 ಕೆಜಿಯಷ್ಟು-ರಸ್ಬೆರಿ, 1 ¾ ಕಪ್-ಸಕ್ಕರೆ, 1 ಲಿಂಬೆಹಣ್ಣು.
ಮೊದಲು ರಸ್ಬೆರಿ ಹಣ್ಣನ್ನು ಚೆನ್ನಾಗಿ ತೊಳೆಯಿರಿ. ಇದನ್ನು ಜಾಮ್ ಪ್ಯಾನ್ ಗೆ ಹಾಕಿ ಇದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಲಿಂಬೆಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಮೇಲೆ ಇಡಿ. ಚೆನ್ನಾಗಿ ಕುದಿಸಿ. ಹಣ್ಣುಗಳೆಲ್ಲ ಚೆನ್ನಾಗಿ ಸಕ್ಕರೆಯೊಂದಿಗೆ ಮಿಕ್ಸ್ ಆಗಿ ದಪ್ಪಗಿನ ಮಿಶ್ರಣವಾಗುವವರೆಗೆ ಕುದಿಸಿ. ಇದು ಜಾಮ್ ನ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ. ಜಾಮ್ ಜಾರಿನೊಳಗೆ ತುಂಬಿಸಿಟ್ಟುಕೊಳ್ಳಿ. ಇದನ್ನು ಚಪಾತಿ, ದೋಸೆ ಮಾಡಿದಾಗ ಹಾಕಿಕೊಂಡು ತಿನ್ನಬಹುದು.