½ ಅಕ್ಕಿ 3 ಗಂಟೆಗಳ ನೆನೆಸಿಡಿ. 1 ಕಪ್ ಸಿಹಿ ಕುಂಬಳಕಾಯಿ ತುರಿ, 1-ಕಪ್ ನೀರು, 2 ಟೇಬಲ್ ಸ್ಪೂನ್-ತುಪ್ಪ, ½ ಕಪ್- ತೆಂಗಿನತುರಿ, ¼ ಕಪ್ –ಬೆಲ್ಲ, ¼ ಟೀ ಸ್ಪೂನ್ ನಷ್ಟು-ಏಲಕ್ಕಿ ಪುಡಿ, ಸ್ವಲ್ಪ-ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಅಕ್ಕಿಗೆ 2 ಟೇಬಲ್ ಸ್ಪೂನ್ ನಷ್ಟು ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬಾಣಲೆಗೆ ತೆಗೆಯಿರಿ. ನಂತರ ಇದಕ್ಕೆ ತುರಿದಿಟ್ಟುಕೊಂಡ ಕುಂಬಳಕಾಯಿ ತುರಿ, ಉಪ್ಪು, ಸ್ವಲ್ಪ ತುಪ್ಪ, ¾ ಲೋಟ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದನ್ನು ಗ್ಯಾಸ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬೇಯಲು ಇಡಿ. ನಂತರ ಇದನ್ನು ತಳ ಹತ್ತದ ಹಾಗೇ ಕೈಯಾಡಿಸುತ್ತಾ ಇರಿ. ಈ ಮಿಶ್ರಣ ಒಂದು ಮುದ್ದೆ ಗಾತ್ರದ ಹಾಗೇ ಆಗುವವರಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ತಳ ಬಿಡುತ್ತಾ ಬಂದಾಗ ಗ್ಯಾಸ್ ಆಫ್ ಮಾಡಿ ಇದನ್ನು ತಣ್ಣಗಾಗಲು ಬಿಡಿ.
ನಂತರ ಒಂದು ಬೌಲ್ ಗೆ ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಗೆ ಹಿಟ್ಟಿನ ಮಿಶ್ರಣ ಹಾಕಿ ಸಮತಟ್ಟು ಮಾಡಿಕೊಳ್ಳಿ.
ನಂತರ ಇದರ ಮೇಲೆ ಕಾಯಿ ಬೆಲ್ಲದ ಮಿಶ್ರಣವನ್ನು ಇದರ ಮೇಲೆ ಹಾಕಿ. ನಂತರ ಕುಕ್ಕರ್ ನಲ್ಲಿ ಈ ಮಿಶ್ರಣದ ತಟ್ಟೆ ಇಟ್ಟು ಕುಕ್ಕರ್ ನ ವಿಷಲ್ ತೆಗೆದು ಆವಿಯಲ್ಲಿ 10 ನಿಮಿಷ ಬೇಯಲು ಬಿಡಿ. ನಂತರ ತಣ್ಣಗಾದ ಮೇಲೆ ಕತ್ತರಿಸಿಕೊಳ್ಳಿ.