ನಿಮ್ಮ ಮಗು ವಿನಾಕಾರಣ ಅಳುತ್ತಿದೆಯಾ, ಇದಕ್ಕೆ ನಿಮ್ಮ ನಡವಳಿಕೆಯೂ ಕಾರಣವಿರಬಹುದು. ಮಗುವನ್ನು ಅರ್ಥೈಸಿಕೊಂಡು ಖುಷಿ ಕೊಡುವ ವಿಧಾನ ತಿಳಿಯೋಣ ಬನ್ನಿ.
ಮಕ್ಕಳು ತಪ್ಪು ಮಾಡುವುದು ಸಹಜ. ಅದೇ ಕಾರಣಕ್ಕೆ ಮಕ್ಕಳ ಮೇಲೆ ರೇಗಾಡದಿರಿ. ದೊಡ್ಡ ಸ್ವರದಿಂದ ಕೂಗಿದರೆ ಮಕ್ಕಳು ಹೆದರುತ್ತಾರೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು, ವಿವರಿಸಿ ಹೇಳಿ ಅಪ್ಪಿ ಮುದ್ದಾಡಿಯೇ ಮಕ್ಕಳನ್ನು ಬದಲಾಯಿಸಬಹುದು. ಮಕ್ಕಳು ಪ್ರೀತಿಗೆ ಬಗ್ಗುತ್ತಾರೆ, ಸಿಟ್ಟಿಗಲ್ಲ!
ಮಗು ಒಳ್ಳೆಯ ಕೆಲಸ ಮಾಡಿದಾಗ ಹೊಗಳಿ. ನಾಲ್ಕು ಮಂದಿಯ ಎದುರು ಪ್ರಶಂಶಿಸಿ. ಇದು ಮಗುವನ್ನು ಮತ್ತಷ್ಟು ಹೊಸ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಚಲನಚಿತ್ರ ಅಥವಾ ಮೊಬೈಲ್ ನತ್ತ ಹೆಚ್ಚು ಆಕರ್ಷಿತನಾಗುತ್ತಿದ್ದಾನೆ ಎನಿಸಿದರೆ ಬೇರೆ ಆಟದೆಡೆ ಮನಸ್ಸು ತಿರುಗಿಸಿ.
ಅವರಿಗಿಷ್ಟದ ಕೆಲಸ ಮಾಡಲು ಬಿಡಿ. ಪುಸ್ತಕ ಹಾಳಾಗುತ್ತದೆ ಎಂದು ಮಕ್ಕಳಿಗೆ ಕೊಡದಿರುವ ಬದಲು ಪೆನ್ನು ಪೇಪರ್ ಕೊಟ್ಟು ಬೇಕಿರುವಷ್ಟು ಗೀಚಲು ಬಿಟ್ಟು ಬಿಡಿ. ಆಟಿಕೆ ಕೊಟ್ಟು ಮನಸ್ಸು ಬದಲಾಯಿಸಿ. ನಿಯಮಗಳನ್ನು ಪಾಲಿಸುವಷ್ಟು ನಿಮ್ಮ ಮಕ್ಕಳು ದೊಡ್ಡವರಾಗಿಲ್ಲ ಎಂಬುದು ನೆನಪಿರಲಿ.
ನೀವು ತಪ್ಪು ಮಾಡಿ ಅದರಿಂದ ಕಲಿತು ಮತ್ತೆ ಮೇಲೆ ಬಂದವರು ಎಂಬುದು ನೆನಪಿರಲಿ. ಹಾಗಾಗಿ ಮಗು ಕಿರುಚಿ ಅತ್ತ ತಕ್ಷಣ ನೀವು ಸಿಟ್ಟಾಗುವ ಬದಲು ಅಳುವಿನ ಕಾರಣ ತಿಳಿಯುವ ಪ್ರಯತ್ನ ಮಾಡಿ.