ಮಕ್ಕಳಿರಲವ್ವ ಮನೆ ತುಂಬಾ ಎಂಬ ಕಾಲವೊಂದಿತ್ತು. ಆದರೆ ಈಗ ಒಂದು ತಪ್ಪಿದರೆ ಎರಡು ಮಕ್ಕಳು. ಮೊದಲನೆಯ ಮಗು ಹೆಣ್ಣಾದರೆ ಒಂದೇ ಸಾಕು ಎಂಬುದು ಕೆಲವರ ಅಭಿಪ್ರಾಯ. ಈಗ ಎಲ್ಲವೂ ದುಬಾರಿ. ಹಾಗಾಗಿ ಒಂದು ಮಗುವಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದರೆ ಸಾಕು. ಎರಡು ಮಕ್ಕಳಾದರೆ ಖರ್ಚು ಜಾಸ್ತಿ ಎನ್ನುವವರು ಇದ್ದಾರೆ.
ಆದರೆ ಮಕ್ಕಳ ಮನಸ್ಸಿನ ಮೇಲೆ ಇದು ತುಂಬಾನೇ ಪ್ರಭಾವ ಬೀರುತ್ತದೆ. ಕೆಲಸದ ಒತ್ತಡ, ಸಂಸಾರದ ನಿರ್ವಹಣೆಯಲ್ಲಿ ಗಂಡ-ಹೆಂಡತಿ ಬ್ಯುಸಿಯಾಗಿರುತ್ಥಾರೆ. ಮಕ್ಕಳಿಗೆ ಒಂಟಿತನ ಕಾಡುತ್ತದೆ. ಅವರು ಬೆಳೆಯುತ್ತಾ ಬಂದಂತೆ ತನಗೆ ತಮ್ಮನೋ, ತಂಗಿನೋ ಇದ್ದರೆ ಚೆನ್ನಾಗಿರುತ್ತೆ ಎಂದುಕೊಳ್ಳುತ್ತಾರೆ.
ಮಕ್ಕಳಿಗೂ ಆಡುವುದಕ್ಕೆ ಯಾರೂ ಜತೆ ಸಿಗುವುದಿಲ್ಲ. ಇದರಿಂದ ಅವರಿಗೆ ಸಂಬಂಧಗಳ ಬಾಂಧವ್ಯದ ಬೆಲೆ ಗೊತ್ತಾಗುವುದಿಲ್ಲ. ಒಡಹುಟ್ಟುವವರು ಇದ್ದರೆ ಅವರ ನೋವು, ನಲಿವುಗಳನ್ನು ಹಂಚಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಜತೆಗೆ ಒಂದೇ ಮಗುವಿಗಿಂತ ಎರಡು ಮಕ್ಕಳಿದ್ದರೆ ತಂದೆ-ತಾಯಿಗೂ ಸಹಾಯವಾಗುತ್ತದೆ.