alex Certify ಮಕ್ಕಳಿಗೆ ಹಸ್ತಾಂತರಿಸಬಹುದು ನಿಮ್ಮ ಉದ್ಯೋಗ, ಈ ಕಂಪನಿ ಪರಿಚಯಿಸ್ತಿದೆ ಹೊಸ ಆಫರ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಹಸ್ತಾಂತರಿಸಬಹುದು ನಿಮ್ಮ ಉದ್ಯೋಗ, ಈ ಕಂಪನಿ ಪರಿಚಯಿಸ್ತಿದೆ ಹೊಸ ಆಫರ್‌…!

ಟಾಟಾ ಸ್ಟೀಲ್ ಕಂಪನಿಯಲ್ಲಿ ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್ ಸ್ಕೀಮ್ ಅನ್ನು ಘೋಷಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಈ ಎರಡೂ ಯೋಜನೆಗಳಿಗೆ ಜೂನ್ 1 ರಿಂದ ಜೂನ್ 30 ರವರೆಗೆ ಅರ್ಜಿ ಸಲ್ಲಿಸಬಹುದು.

ಜಾಬ್ ಫಾರ್ ಜಾಬ್ ಸ್ಕೀಮ್ ಅಡಿಯಲ್ಲಿ ಉದ್ಯೋಗಿಗಳು ತಮ್ಮ ಮಗ, ಮಗಳು, ಅಳಿಯ ಅಥವಾ ಇನ್ನಾವುದೇ ಅವಲಂಬಿತರನ್ನು ಹೆಸರಿಸುವ ಮೂಲಕ ತಮ್ಮ ಉದ್ಯೋಗಗಳನ್ನು ವರ್ಗಾಯಿಸಲು ಅವಕಾಶವಿದೆ.  ಟಾಟಾ ಸ್ಟೀಲ್‌, ಈ ಎರಡು ಯೋಜನೆಗಳನ್ನು ಸಂಯೋಜಿಸುವ ಮೂಲಕ  ತನ್ನ ಹೆಸರನ್ನು ‘ಗೋಲ್ಡನ್ ಫ್ಯೂಚರ್ ಪ್ಲಾನ್’ ಎಂದು ಕರೆದಿದೆ.

ಖುದ್ದು ಟಾಟಾ ಸ್ಟೀಲ್ ಉಪಾಧ್ಯಕ್ಷ ಅತ್ರಾಯಿ ಸನ್ಯಾಲ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಜಾಬ್ ಫಾರ್ ಜಾಬ್ ಯೋಜನೆಯಡಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಕನಿಷ್ಠ ಐದೂವರೆ ವರ್ಷಗಳು. ನಂತರ ಅವರು ತಮ್ಮ ಉದ್ಯೋಗವನ್ನು ಮಗ, ಮಗಳು, ಅಳಿಯ ಅಥವಾ ಇತರ ಅವಲಂಬಿತರಿಗೆ ವರ್ಗಾಯಿಸಬಹುದು.

ಆದ್ರೆ ಇದಕ್ಕಾಗಿ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಮೂರು ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು. ನಂತರ ಪ್ರಶಿಕ್ಷಣಾರ್ಥಿಯಾಗಿ ಅವರ ಸೇವೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅವರಿಗೆ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಅವರ ಸೇವೆಯನ್ನು ಖಾಯಂಗೊಳಿಸಲಾಗುವುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅವಲಂಬಿತರು ಕೆಲಸದಿಂದ ವಂಚಿತರಾಗುತ್ತಾರೆ.

ಕೆಲಸ ವರ್ಗಾವಣೆ ಮಾಡುವ ಉದ್ಯೋಗಿಗೆ ಮಾಸಿಕ 13,000 ರೂಪಾಯಿ ಸಿಗುತ್ತದೆ.  ಉದ್ಯೋಗಿಯ ವಯಸ್ಸು 40 ಆಗಿದ್ದರೆ ಅಥವಾ ಹತ್ತು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದವರು ಉದ್ಯೋಗ ವರ್ಗಾವಣೆ ಮಾಡಲು ಅರ್ಹರಾಗಿರುತ್ತಾರೆ.

ಉದ್ಯೋಗಿಯು ನಿವೃತ್ತಿಯ ತನಕ ಅಸ್ತಿತ್ವದಲ್ಲಿರುವ ಮೂಲ ವೇತನ ಮತ್ತು ಡಿಎ ಪ್ರಯೋಜನವನ್ನು ಪಡೆಯುತ್ತಾನೆ. ಆದರೆ ವಸತಿ ಸೌಲಭ್ಯ ಸಿಗುವುದಿಲ್ಲ. ಉದ್ಯೋಗಿಗಳು ಕಂಪನಿಯ ನಿವಾಸದಲ್ಲಿ ಉಳಿಯಲು ಬಯಸಿದರೆ ಅವರು ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. 58 ವರ್ಷ ವಯಸ್ಸಿನವರೆಗೆ ಅಲ್ಲೇ ಉಳಿಯಬಹುದು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...