alex Certify ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ ಮಾಡುತ್ತವೆ. ಈ ರೀತಿ ಕೆಮ್ಮು ಅಥವಾ ಶೀತ ನಿವಾರಣೆಗೆ ಈ ಮನೆ ಮದ್ದು ಬಳಸಿದರೆ ಒಳ್ಳೆಯದು.

ಆವಿ ಕೊಡುವುದು

ನೀರನ್ನು ಕುದಿಸಿದಾಗ ಬರುವ ಆವಿಗೆ ಟವಲ್ ಹಿಡಿದು ಅದರಿಂದ ಮಗುವಿನ ಮೈಗೆ ಮೆಲ್ಲನೆ ಒತ್ತಬೇಕು. ಅಥವಾ ಅಮೃತಾಂಜನ ಹಾಕಿ ಆವಿ ಕೊಡಬಹುದು. ಎದೆ, ಬೆನ್ನಿನ ಭಾಗಕ್ಕೆ ಮೆಲ್ಲನೆ ಒತ್ತಬೇಕು. ಆಗ ಮೂಗು ಕಟ್ಟಿದ್ದರೆ ಮಗುವಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ.

ಜೇನು, ಕರಿಮೆಣಸಿನ ಪುಡಿ ಮತ್ತು ತುಳಸಿ

ಅರ್ಧ ಚಮಚ ಜೇನಿಗೆ 1-2 ಕರಿ ಮೆಣಸಿನ ಪುಡಿ ಮತ್ತು ತುಳಸಿ ರಸ ಮಿಶ್ರ ಮಾಡಿ ಕುಡಿಸಿದರೆ ಕೆಮ್ಮು ಕಮ್ಮಿಯಾಗುತ್ತದೆ.

ಅರಿಶಿಣ

ಅರಿಶಿಣ ಪುಡಿಯನ್ನು ಬಿಸಿ ಮಾಡಿ ಅದನ್ನು ಎದೆಗೆ ಉಜ್ಜಿ ಹಾಲು ಕುಡಿಸಬೇಕು ಅಥವಾ ಹಾಲಿನ ಬಾಟಲಿಯ ನಿಪ್ಪಲ್‌ಗೆ ಉಜ್ಜಿ ಹಾಲು ಕುಡಿಸಬೇಕು. ಈ ರೀತಿ ದಿನಕ್ಕೆ 2 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುತ್ತದೆ.

ಎಣ್ಣೆ ಮಸಾಜ್

ನೀಲ್‌ಗಿರಿ, ರೋಸ್‌ಮೆರಿ ಎಣ್ಣೆ, ಪುದೀನಾ ಎಣ್ಣೆಯಿಂದ ಮಸಾಜ್ ಮಾಡಿದರೆ ಶೀತ ಮತ್ತು ಕೆಮ್ಮಿನಿಂದ ಮೂಗು ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ. ನಂತರ ಮಗುವಿಗೆ ಉಣ್ಣೆಯ ಬಟ್ಟೆ ಧರಿಸಬೇಕು. ಈ ರೀತಿ ಮಾಡಿದರೆ ಕೆಮ್ಮು ಕಮ್ಮಿಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...