ಬೆಂಗಳೂರು: ಮಕ್ಕಳಿಗೆ ವ್ಯಾಕ್ಸಿನೇಷನ್ ಹಾಕಿಸಬೇಕೇ ಅಥವಾ ಬೇಡವೇ ಎಂಬುದು ಹಲವು ತಂದೆ-ತಾಯಿಯಲ್ಲಿರುವ ಗೊಂದಲ. ಒಂದು ವೇಳೆ ಲಸಿಕೆ ಹಾಕಿಸಿದರೆ ಸಮಸ್ಯೆಯಾಗಬಹುದೇ? ಹಾಕಿಸದಿದ್ದರೆ ಏನಾಗುತ್ತೆ ಎಂಬ ನೂರಾರು ಪ್ರಶ್ನೆ…… ಮಕ್ಕಳಿಗೆ ವ್ಯಾಕ್ಸಿನ್ ಬೇಕೇ ಬೇಡವೇ? ಸತ್ಯಾಸತ್ಯತೆ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.
ಕೋವಿಡ್ ಮೊದಲ ಅಲೆಯಲ್ಲಿ ಶೇ.5 ರಷ್ಟು ಜನರಿಗೆ ಕೋವಿಡ್ ಇನ್ ಫೆಕ್ಷನ್ ಆಗಿದೆ. ಎರಡನೇ ಅಲೆಯಲ್ಲಿ ಉಳಿದ ಶೇ.95ರಷ್ಟು ಜನರಿಗೆ ಇನ್ ಫೆಕ್ಷನ್ ಆಗಿದೆ. ಒಮ್ಮೆ ಇನ್ ಫೆಕ್ಷನ್ ಆಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದರೆ ಯಾವುದೇ ರೀತಿಯ ಲಸಿಕೆ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಎರಡನೇ ಅಲೆಯಲ್ಲಿ ಇನ್ ಫೆಕ್ಷನ್ ಆದ ಯಾವುದೇ ಮಕ್ಕಳಿಗೂ ಸ್ಯಾಚುರೇಷನ್ ಸಮಸ್ಯೆ ಅಥವಾ ಉಸಿರಾಟದ ತೊಂದರೆ ಉಂಟಾಗಿಲ್ಲ. ಕಾರಣ ಇಮ್ಯುನಿಟಿ ಉತ್ತಮವಾಗಿದ್ದಲ್ಲಿ ಮಕ್ಕಳಿಗೆ ವ್ಯಾಕ್ಸಿನೇಷನ್ ಅಗತ್ಯವಿಲ್ಲ. ಯಾವುದೇ ಲಸಿಕೆಯಿಂದ ಮಕ್ಕಳ ಇಮ್ಯುನಿಟಿ ಉತ್ತಮ ಪಡಿಸಲು ಸಾಧ್ಯವಿಲ್ಲ. ಯಾವುದೇ ಲಸಿಕೆ ಸಂಪೂರ್ಣ ಸುರಕ್ಷಿತ ಅಥವಾ ಅಡ್ಡಪರಿಣಾಮವಿಲ್ಲ ಎಂದು ಹೇಳಲಾಗದು. ನೂರಕ್ಕೆ ನೂರರಷ್ಟು ಯಾವ ಲಸಿಕೆಯೂ ಸುರಕ್ಷಿತವಲ್ಲ. ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ಹಲವರಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಹಾಗಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಮಾತ್ರಕ್ಕೆ ಕೋವಿಡ್ ಬರುವುದಿಲ್ಲ ಎಂದು ಖಚಿತವಾಗಿ ಹೇಳಲಾಗದು. ಆದರೆ ಲಸಿಕೆ ಹಾಕಿಸುವುದರಿಂದ ಇನ್ ಫೆಕ್ಷನ್ ಆದರೂ ಗಂಭೀರ ಸಮಸ್ಯೆಯಿಂದ ಪಾರಾಗಬಹುದು ಎಂದು ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ಲಸಿಕೆ ಕಡ್ಡಾಯ ವಿಚಾರವಾಗಿಯೂ ಮಾತನಾಡಿರುವ ಡಾ.ರಾಜು, ಒಂದೊಮ್ಮೆ ಶಾಲೆಗಳಲ್ಲಿ ಮಕ್ಕಳಿಗೆ ಬಲವಂತವಾಗಿ ಲಸಿಕೆ ಹಾಕಿಸಲೇಬೇಕು ಎಂದು ಹೇಳಿದರೆ ಆಯಾ ಶಿಕ್ಷಣ ಸಂಸ್ಥೆ, ಶಾಲಾ ಪ್ರಾಂಶುಪಾಲರು ಅಥವಾ ಯಾವುದೇ ಕಂಪನಿಯಿಂದ ಲಿಖಿತ ರೂಪದಲ್ಲಿ ’ಲಸಿಕೆ ಪಡೆದು ಸಮಸ್ಯೆಯಾದರೆ ನೀವೇ ಜವಾಬ್ದಾರ’’ ಎಂಬ ಬಗ್ಗೆ ಪತ್ರರೂಪದಲ್ಲಿ ಸಹಿ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.