ಹಣ್ಣುಗಳು ಯಾರಿಗೆ ತಾನೆ ಇಷ್ಟವಿರೋದಿಲ್ಲ ಹೇಳಿ? ಮಕ್ಕಳಿಗೆ ಕೆಲವೊಮ್ಮೆ ಒಂದೇ ರೀತಿಯ ಹಣ್ಣನ್ನು ತಿನ್ನಲು ಕೊಟ್ಟರೆ ತಿನ್ನೋದಿಕ್ಕೆ ಹಠ ಮಾಡ್ತಾರೆ.
ಅದೇ ನೀವು ಬಗೆ ಬಗೆಯ ಹಣ್ಣುಗಳನ್ನು ಸಲಾಡ್ ರೀತಿ ಮಾಡಿ ಕೊಟ್ಟರೆ ಖುಷಿಯಾಗಿ ತಿನ್ನುತ್ತಾರೆ. ನೋಡೋದಕ್ಕೆ ಕಲರ್ಫುಲ್ ಆಗಿ ತಿನ್ನೋದಕ್ಕೆ ಬೇಡ ಅಂತ ಹೇಳೋಕೆ ಸಾಧ್ಯಾನೇ ಇಲ್ಲ.
ಬೇಕಾಗಿರುವ ಪದಾರ್ಥಗಳು:
ಬಾಳೆಹಣ್ಣು – 1, ಕಿತ್ತಳೆ ಹಣ್ಣು – 1, ಸ್ಟ್ರಾಬೆರಿ 5 – ತುಂಡುಗಳು, 1/2 ಚಮಚ – ನಿಂಬೆ ರಸ, ¼ ಚಮಚ – ಸಕ್ಕರೆ, ದ್ರಾಕ್ಷಿ ಹಣ್ಣು – 1 ಹಿಡಿ, ಅನಾನಸ್ – 5 ತುಂಡುಗಳು, ಸೇಬು – 1, ¼ ಚಮಚ ಚಾಟ್ ಮಸಾಲಾ, ಪುದೀನಾ ಎಲೆ ಸ್ವಲ್ಪ.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ನಲ್ಲಿ ಸಿಪ್ಪೆ ತೆಗೆದ ಬಾಳೆಹಣ್ಣನ್ನು ದಪ್ಪ ಹೋಳುಗಳನ್ನಾಗಿ ಕತ್ತರಿಸಿ ಹಾಕಿ. ಇದಕ್ಕೆ ದ್ರಾಕ್ಷಿ , ಸ್ಟ್ರಾಬೆರಿ, ಸೇಬು, ಅನಾನಸ್ ಮತ್ತು ಕಿತ್ತಳೆಯನ್ನು ಕಟ್ ಮಾಡಿ ಸೇರಿಸಿ.
ಇದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ ನಂತರ ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಬೆನ್ನಾಗಿ ಮಿಕ್ಸ್ ಮಾಡಿ, ಕೊನೆಯಲ್ಲಿ ಪುದೀನಾ ಎಲೆಗಳಿಂದ ಅಲಂಕರಿಸಿದರೆ ಮಿಕ್ಸಡ್ ಫ್ರೂಟ್ ಸಲಾಡ್ ರೆಡಿ.