ಕೆಲವು ಮಕ್ಕಳು ಹಾಲು ಕೊಟ್ಟರೆ ಕುಡಿಯುವುದಿಲ್ಲ. ಇನ್ನು ಅದಕ್ಕೆ ಹಾರ್ಲಿಕ್ಸ್, ಬೂಸ್ಟ್ ಸೇರಿಸಿ ಕೊಡುವ ಬದಲು ಮನೆಯಲ್ಲಿಯೇ ರುಚಿಕರವಾದ ಮಿಲ್ಕ್ ಶೇಕ್ ಮಾಡಿಕೊಳ್ಳಿ. ಇದು ಮಕ್ಕಳ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಖರ್ಜೂರ – 8, ಬಾದಾಮಿ – 5, ಬಾಳೆಹಣ್ಣು – 1, ಹಾಲು 1 ಗ್ಲಾಸ್.
ಮಾಡುವ ವಿಧಾನ:
½ ಕಪ್ ಹಾಲಿನಲ್ಲಿ 8 ಖರ್ಜೂರವನ್ನು 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಲು ಸಹಿತ ಹಾಕಿಕೊಳ್ಳಿ. ನಂತರ ಬಾದಾಮಿ, ಬಾಳೆಹಣ್ಣು, ಹಾಗೇ ½ ಕಪ್ ಹಾಲು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
ಮಿಲ್ಕ್ ಶೇಕ್ ತುಂಬಾ ದಪ್ಪಗಾದರೆ ಹಾಲು ಸೇರಿಸಿಕೊಳ್ಳಿ. ಬಾಳೆಹಣ್ಣು ಹಾಕಿರುವುದರಿದ ಸಕ್ಕರೆಯ ಅವಶ್ಯಕತೆ ಇರುವುದಿಲ್ಲ. ಇದನ್ನು ಒಂದು ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಕ್ಕಳ ತೂಕ ಕೂಡ ಹೆಚ್ಚಾಗುತ್ತದೆ.