ಕುಕ್ಕಿಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೇಳುತ್ತಾ ಇರುತ್ತಾರೆ. ಹಾಗಾಗಿ ಸುಲಭವಾಗಿ ಜೊತೆಗೆ ಆರೋಗ್ಯಕರವಾಗಿ ಮಾಡಬಹುದಾದ ಕುಕ್ಕೀಸ್ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
¾ ಕಪ್ – ಗೋಧಿ ಹಿಟ್ಟು, ½ ಕಪ್ – ಬೆಣ್ಣೆ, ¼ ಕಪ್ – ಸಕ್ಕರೆ ಪುಡಿ, ¼ ಟೀ ಸ್ಪೂನ್ – ಬೇಕಿಂಗ್ ಪುಡಿ, ¼ ಟೀ ಸ್ಪೂನ್ – ಬೇಕಿಂಗ್ ಸೋಡಾ, 1 ½ ಟೇಬಲ್ ಸ್ಪೂನ್ – ಒಣ ಏಪ್ರಿಕಾಟ್ ಹಣ್ಣು ಸಣ್ಣಗೆ ಕತ್ತರಿಸಿಕೊಂಡಿದ್ದು, 1 ½ ಟೇಬಲ್ ಸ್ಪೂನ್ – ಗೋಡಂಬಿ ಬೀಜ (ಸಣ್ಣಗೆ ಕತ್ತರಿಸಿಕೊಂಡಿದ್ದು) 2 ಟೀ ಸ್ಪೂನ್ ಆರೇಂಜ್ ಫ್ಲೇವರ್ಡ್ ಡ್ರಿಂಕ್ ಮಿಕ್ಸ್, 1/3 ಕಪ್ – ಹಾಲು, ½ ಟೀ ಸ್ಪೂನ್ – ಬೆಣ್ಣೆ.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು, ಸಕ್ಕರೆ ಪುಡಿ, ಬೇಕಿಂಗ್ ಪುಡಿ, ಬೇಕಿಂಗ್ ಸೋಡಾ, ಏಪ್ರಿಕಾಟ್, ಗೋಡಂಬಿ, ಆರೇಂಜ್ ಫ್ಲೇವರ್ಡ್ ಡ್ರಿಂಕ್ ಮಿಕ್ಸ್ , ಹಾಲು ಎಲ್ಲವನ್ನೂ ಒಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ಮೆದುವಾದ ಒಂದು ಮುದ್ದೆ ರೀತಿಯಂತೆ ಮಾಡಿಕೊಳ್ಳಿ. ನಂತರ ಇದನ್ನು ಒಂದು ಪೈಪಿಂಗ್ ಬ್ಯಾಗ್ ಗೆ ಹಾಕಿ ಅದರ ತುದಿಯನ್ನು ಕತ್ತರಿಸಿಕೊಳ್ಳಿ. ಬೇಕಿಂಗ್ ಟ್ರೇ ಗೆ ತುಪ್ಪ ಸವರಿ ಪೈಪಿಂಗ್ ಬ್ಯಾಗ್ ನಲ್ಲಿರುವ ಮಿಶ್ರಣವನ್ನು ಟ್ರೇ ಮೇಲೆ ಚಿಕ್ಕ ಚಿಕ್ಕದ್ದಾಗಿ ಕುಕ್ಕೀಸ್ ರೀತಿಯಲ್ಲಿ ಹಾಕಿ ಪ್ರಿ ಹೀಟ್ ಮಾಡಿಕೊಂಡ ಓವೆನ್ ನಲ್ಲಿ 25 ನಿಮಿಷಗಳ ಕಾಲ ಬೇಕ್ ಮಾಡಿಕೊಂಡು ಸವಿಯಿರಿ.