ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
3 ಟೇಬಲ್ ಸ್ಪೂನ್ ಕೊಕೋ ಪೌಡರ್, ¼ ಕಪ್ ಬಿಸಿ ನೀರು, 1/3 ಕಪ್-ಕರಗಿಸಿದ ತುಪ್ಪ, 1-ಮೊಟ್ಟೆ, 1-ಕಪ್-ಬೆಲ್ಲದ ಪುಡಿ, ¼ ಕಪ್-ಬೇಂಕಿಗ್ ಸೋಡಾ, ½ ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, 1 ಕಪ್- ಗೋಧಿ ಹಿಟ್ಟು, ¼ ಟೀ ಸ್ಪೂನ್-ಉಪ್ಪು, 1 ಕಪ್- ಚಾಕೋಲೆಟ್ ಚಿಪ್ಸ್.
ಮಾಡುವ ವಿಧಾನ:
ಬಿಸಿ ನೀರಿಗೆ ಕೋಕೊ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಇದಕ್ಕೆ ಕರಗಿಸಿದ ಬೆಣ್ಣೆ ಹಾಕಿ ನಂತರ ಒಂದು ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಲ್ಲದ ಪುಡಿ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ.
ನಂತರ ಗೋಧಿಹಿಟ್ಟು ವೆನಿಲ್ಲಾ, ಉಪ್ಪು, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ ಚಾಕೋಲೆಟ್ ಚಿಪ್ಸ್ ಸೇರಿಸಿ ಮಿಕ್ಸ್ ಮಾಡಿ ಒಂದು ಕೇಕ್ ಮೌಲ್ಡ್ ಗೆ ತುಪ್ಪ ಸವರಿ ಈ ಮಿಶ್ರಣ ಹಾಕಿ ಪ್ರೀ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 35 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ಬ್ರೌನಿ ರೆಡಿ.