ಚಿಕ್ಕಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ ಆಗುವಂತಹ ಗೋಧಿ ಬಿಸ್ಕೇಟ್ ತಯಾರಿಸುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – 1 ಕಪ್, ರಾಕ್ ಶುಗರ್ – 1/2 ಕಪ್ (ಪುಡಿ ಮಾಡಿಕೊಂಡಿದ್ದು), ತುಪ್ಪ – 1/4 ಕಪ್, ಒಣ ಶುಂಠಿ ಪುಡಿ – 1/2 ಟೀ ಸ್ಪೂನ್, ಹಾಲು – 3 ಟೇಬಲ್ ಸ್ಪೂನ್.
ತಯಾರಿಸುವ ವಿಧಾನ:
ಬೌಲ್ ಗೆ ರಾಕ್ ಶುಗರ್ ಹಾಗೂ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದು ಕ್ರೀಂ ನ ಹದಕ್ಕೆ ಬರಲಿ. ನಂತರ ಇದಕ್ಕೆ ಒಣಶುಂಠಿ ಪುಡಿ ಸೇರಿಸಿ ಮಿಕ್ಸ್ ಮಾಡಿ. ಗೋಧಿ ಹಿಟ್ಟು ಸೇರಿಸಿ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ನಂತರ ಇದನ್ನು ಒಂದು ಪ್ಲಾಸ್ಟಿಕ್ ಕವರ್ ಮಧ್ಯೆ ಇಟ್ಟು ಅದರ ಮೇಲೆ ಇನ್ನೊಂದು ಪ್ಲಾಸ್ಟಿಕ್ ಕವರ್ ಇಟ್ಟು ಲಟ್ಟಿಸಿಕೊಳ್ಳಿ. ತುಂಬಾ ತೆಳುವಾಗಿ ಲಟ್ಟಿಸಬೇಡಿ. ಚೌಕಾಕಾರದಲ್ಲಿ ಲಟ್ಟಿಸಿದರೆ ಒಳ್ಳೆಯದು.
ನಂತರ ಚಾಕುವಿನ ಸಹಾಯದಿಂದ ಮಕ್ಕಳಿಗೆ ಕೈಯಲ್ಲಿ ಹಿಡಿದು ತಿನ್ನುವುದಕ್ಕೆ ಸುಲಭವಾಗುವ ರೀತಿ ಉದ್ದಕ್ಕೆ, ಸ್ವಲ್ಪ ಅಗಲಕ್ಕೆ ಕತ್ತರಿಸಿಕೊಳ್ಳಿ. ನಂತರ ಬೇಕಿಂಗ್ ಟ್ರೇ ಮೇಲೆ ಬಟರ್ ಪೇಪರ್ ಇಟ್ಟು ಅದರ ಮೇಲೆ ಈ ಕುಕ್ಕಿಸ್ ಇಟ್ಟು ಪ್ರಿ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 15 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ನಂತರ ಇದು ತಣ್ಣಗಾದ ಮೇಲೆ ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.