ಚಾಕೋಲೆಟ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ಬಾರಿ ಹೊರಗಡೆಯಿಂದ ಕೊಂಡು ತರುವ ಬದಲು ಮನೆಯಲ್ಲೇ ಸುಲಭವಾಗಿ ರುಚಿಕರವಾದ ಚಾಕೋಲೆಟ್ ಮಾಡಿಕೊಂಡು ಸವಿಯಿರಿ.
ಒಂದು ಬೌಲ್ ಗೆ 1 ಕಪ್ ಸಕ್ಕರೆ ಪುಡಿ, ¾ ಕಪ್ ಕೋಕೊ ಪುಡಿ, ¼ ಕಪ್ ಹಾಲಿನ ಪುಡಿ ಹಾಕಿ. ಒಂದು ಬಾಣಲೆಗೆ ನೀರು ಹಾಕಿ ಗ್ಯಾಸ್ ಮೇಲೆ ಇಡಿ. ಅದು ಕುದಿಯಲು ಶುರು ಮಾಡಿದಾಗ ಅದರ ಮೇಲೆ ಒಂದು ಗ್ಲಾಸ್ ಬೌಲ್ ಇಡಿ. ಅದಕ್ಕೆ ¾ ಕಪ್ ತೆಂಗಿನೆಣ್ಣೆ ಹಾಕಿಕೊಳ್ಳಿ.
ಅದು ಬಿಸಿಯಾಗುತ್ತಲೆ ಚಾಕೋಲೆಟ್ ಮಿಶ್ರಣವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದು ತುಸು ದಪ್ಪಗಾಗುತ್ತಲೆ ಕೆಳಗೆ ಇಳಿಸಿಕೊಂಡು ಚಾಕೋಲೆಟ್ ಮೌಲ್ಡ್ ಗೆ ಇದನ್ನು ಹಾಕಿಕೊಂಡು ಫ್ರಿಡ್ಜ್ ನಲ್ಲಿ 3 ಗಂಟೆಗಳ ಕಾಲ ಇಡಿ. ಇದು ಚೆನ್ನಾಗಿ ಸೆಟ್ ಆದ ಮೇಲೆ ತೆಗೆದು ಸವಿಯಿರಿ.