
ಭಾರತದಲ್ಲಿ ಅನೇಕ ವಿಷ್ಯಗಳನ್ನು ಈಗ್ಲೂ ಮಕ್ಕಳ ಮುಂದೆ ಮಾತನಾಡುವುದಿಲ್ಲ. ತಂದೆ-ತಾಯಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಸೆಕ್ಸ್ ಸೇರಿದಂತೆ ಕೆಲ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ.
ಇದು ಡಿಜಿಟಲ್ ದುನಿಯಾ. ಮಕ್ಕಳು ಸ್ಮಾರ್ಟ್ಫೋನ್ ಗೂಗಲ್ ಮೂಲಕ ಈ ಬಗ್ಗೆ ತಿಳಿದುಕೊಳ್ತಾರೆ. ಇದ್ರ ಪರಿಣಾಮ ಕೆಟ್ಟದಾಗಿರುತ್ತದೆ. ಹೊರಗಿನಿಂದ ಮಾಹಿತಿ ಪಡೆದು ತಪ್ಪಾಗಿ ಗ್ರಹಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಬಹಳ ಮುಖ್ಯ.
ಮಕ್ಕಳು ದೊಡ್ಡವರಾಗ್ತಿದ್ದಂತೆ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ.ಈ ಬದಲಾವಣೆಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಲಾಗದೆ ಗೊಂದಲದಲ್ಲಿರುತ್ತಾರೆ. ಹಾಗಾಗಿ ಮಕ್ಕಳಿಗೆ ದೇಹ ಹಾಗೂ ಮನಸ್ಸಿನಲ್ಲಾಗುವ ಬದಲಾವಣೆಯನ್ನು ಪಾಲಕರಾದವರು ವಿವರಿಸಬೇಕಾಗುತ್ತದೆ.
ದೊಡ್ಡವರಾಗ್ತಿದ್ದಂತೆ ಸೆಕ್ಸ್ ಬಗೆಗಿನ ಕುತೂಹಲ ತಣಿಸಿಕೊಳ್ಳಲು ಇಂಟರ್ನೆಟ್ ಸಹಾಯ ಪಡೆಯುತ್ತಾರೆ. ಮಕ್ಕಳು ಇಂಥ ವಿಡಿಯೋ ನೋಡಿದ್ದಾರೆಂಬುದು ಗೊತ್ತಾಗ್ತಿದ್ದಂತೆ ಪಾಲಕರು ಕೋಪಗೊಳ್ತಾರೆ. ಆದ್ರೆ ಕೋಪಗೊಳ್ಳುವ ಬದಲು ಮಕ್ಕಳಿಗೆ ತಿಳಿಸಿ ಹೇಳಬೇಕು. ವಿಡಿಯೋದಿಂದ ಎಲ್ಲವನ್ನು ತಿಳಿಯಲು ಸಾಧ್ಯವಿಲ್ಲ. ಅದು ತಪ್ಪು ಮಾರ್ಗವೆಂದು ಅವರಿಗೆ ಹೇಳಬೇಕು.
ಮಕ್ಕಳಿಗೆ ಪಾಲಕರು ಸಮಯ ನೀಡುವುದಿಲ್ಲ. ಮಕ್ಕಳು ಮೊಬೈಲ್, ಸ್ನೇಹಿತರ ಜೊತೆ ಈ ವಿಷ್ಯಗಳ ಬಗ್ಗೆ ಚರ್ಚೆ ಶುರು ಮಾಡುತ್ತಾರೆ. ಅಲ್ಲಿಂದ ಅವ್ರಿಗೆ ಸೂಕ್ತ ಮಾಹಿತಿ ಸಿಗುವುದಿಲ್ಲ. ತಪ್ಪು ದಾರಿಗಿಳಿಯಲು ಕಾರಣವಾಗುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗುತ್ತದೆ.