alex Certify ಮಕ್ಕಳಿಗೆ ನಿತ್ಯ ನೀಡಿ ಆರೋಗ್ಯಕರ ಪೇಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ನಿತ್ಯ ನೀಡಿ ಆರೋಗ್ಯಕರ ಪೇಯ

ಸಣ್ಣ ಮಕ್ಕಳು ತಂಪು ಪಾನೀಯ, ಜ್ಯೂಸ್, ಬಣ್ಣಬಣ್ಣದ ಪ್ಯಾಕೆಟ್ ನಲ್ಲಿ ಬರುವ ಪೇಯಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಇವುಗಳನ್ನು ಕುಡಿಯುವುದರಿಂದ ಮಕ್ಕಳಿಗೆ ಬೇಕಾದ ಅಗತ್ಯ ಪೋಷಕಾಂಶಗಳು ದೊರೆಯುವುದಿಲ್ಲ. 

ಹೀಗಾಗಿ ಮಕ್ಕಳಿಗೆ ಮನೆಯಲ್ಲಿಯೇ ತಯಾರಿಸಿದ ಹೆಲ್ದಿ ಪೇಯ ಕೊಡುವುದು ಅತ್ಯಗತ್ಯ. ಅವರ ನಿತ್ಯದ ಆಹಾರದಲ್ಲಿ ಈ ಕೆಳಗಿನ ಆರೋಗ್ಯಕರ ಪೇಯಗಳಿರಲಿ.

ಹಾಲು

ಕ್ಯಾಲ್ಸಿಯಂ, ಪೊಟ್ಯಾಶಿಯಂ, ಫಾಸ್ಪರಸ್, ವಿಟಮಿನ್, ಖನಿಜಾಂಶಗಳ ಪ್ರಮುಖ ಮೂಲವಾಗಿರುವ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಪೇಯ. ಪ್ರತಿ ದಿನ ಹಾಲು ಕುಡಿಯುವುದರಿಂದ ಕೆಲವು ಸಾಮಾನ್ಯ ಕಾಯಿಲೆಗಳಿಂದ ದೂರವಿರಬಹುದು. ಇದು ದೇಹಕ್ಕೆ ತಕ್ಷಣ ಶಕ್ತಿ ನೀಡಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಆಗಲಿಲ್ಲದಿದ್ದರೆ ಸೋಯಾ, ಬಾದಾಮಿ, ಓಟ್ ಮಿಲ್ಕ್ ಮುಂತಾದ ಸಸ್ಯ ಜನ್ಯ ಹಾಲುಗಳನ್ನು ನೀಡಬಹುದು.

ಸ್ಮೂದಿ

ಕೆಲವು ಮಕ್ಕಳು ಹಾಲು ಕುಡಿಯುವುದನ್ನು ಇಷ್ಟಪಡುವುದಿಲ್ಲ. ಅಂತವರಿಗೆ ಮಿಲ್ಕ್ ಶೇಕ್ ಮತ್ತು ಸ್ಮೂದಿ ಆಪ್ಷನ್ ಬೆಸ್ಟ್. ಕಡಿಮೆ ಸಕ್ಕರೆ ಮತ್ತು ಹೆಚ್ಚು ಹಾಲು ಬಳಸಿ ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಸಮಯದಲ್ಲಿ ಇವುಗಳನ್ನು ತಯಾರಿಸಬಹುದು. ದಪ್ಪ ಮತ್ತು ರುಚಿಯಾಗಿರುವ ಸ್ಮೂದಿ ಮತ್ತು ಮಿಲ್ಕ್ ಶೇಕ್ ಅನ್ನು ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ.

ಎಳನೀರು

ನೀರು ಕುಡಿಯಲು ಒಲ್ಲದ ಮಕ್ಕಳಿಗೆ ಆಗಾಗ ಎಳನೀರು ಕುಡಿಸಿ. ಇದು ಎಲೆಕ್ಟ್ರೋಲೈಟ್ ಅನ್ನು ಪರ್ಫೆಕ್ಟಾಗಿ ಸಮತೋಲನದಲ್ಲಿಡುತ್ತದೆ. ಮತ್ತು ದೇಹದಲ್ಲಿ ಇಡೀ ದಿನ ನೀರಿನಂಶವನ್ನು ಕಾಪಾಡುತ್ತದೆ. ಮಕ್ಕಳಿಗೆ ಅಜೀರ್ಣ ವಾಗಿದ್ದರೆ ತಾಜಾ ಎಳನೀರು ಕೊಡಬಹುದು.

ಹಣ್ಣು ಮತ್ತು ತರಕಾರಿ ಜ್ಯೂಸ್

ಮಕ್ಕಳಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಗಬೇಕಿದ್ದರೆ ಹಣ್ಣು ಮತ್ತು ತರಕಾರಿಗಳ ಜ್ಯೂಸ್ ಕುಡಿಸಿ. ಸಕ್ಕರೆ ಮತ್ತು ಫ್ಲೇವರ್ ಹಾಕದಿದ್ದರೆ ಇನ್ನೂ ಒಳ್ಳೆಯದು. ಈ ಜ್ಯೂಸ್ ಇಡೀ ದಿನ ದೇಹಕ್ಕೆ ಶಕ್ತಿ ನೀಡುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...