ಮಕ್ಕಳಿಗೆ ಊಟ ಕೊಡುವ ಮೊದಲ ತುತ್ತನ್ನು ತುಪ್ಪದಲ್ಲಿ ಕಲಸಿ ಕೊಡಿ. ಇದರಿಂದ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ಗೊತ್ತೇ?
ಮಕ್ಕಳಿಗೆ ಊಟ ಮಾಡಿಸುವುದು ಕಷ್ಟದ ಕೆಲಸ. ಅದರಲ್ಲೂ ಮೊದಲ ನಾಲ್ಕು ತುತ್ತಿನಲ್ಲಿ ರುಚಿ ಗುರುತಿಸಿ ತಿನ್ನಲೊಲ್ಲದ ಮಕ್ಕಳೇ ಹೆಚ್ಚು. ಹಾಗಿರುವಾಗ ಮೊದಲ ಎರಡು ತುತ್ತನ್ನು ಅಂದರೆ ಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿನ್ನಿಸುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತವೆ.
ತುಪ್ಪದಲ್ಲಿ ಒಳ್ಳೆಯ ಕೊಬ್ಬಿನ ಅಂಶವಿದ್ದು ಇವು ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ. ಆರೋಗ್ಯ ಹೆಚ್ಚಿಸುವ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
ಮಕ್ಕಳು ಕೈಗೆ ಸಿಕ್ಕಿದ್ದೆಲ್ಲಾ ತಿಂದು ಅಜೀರ್ಣದಂಥ ಸಮಸ್ಯೆ ಕಾಣಿಸಿಕೊಂಡಿದ್ದರೆ ಈ ತುಪ್ಪದ ಅನ್ನ ಅವರ ಸಮಸ್ಯೆಯನ್ನು ನಿವಾರಿಸುತ್ತದೆ. ಮಕ್ಕಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿ ಇರುವಂತೆಯೂ ನೋಡಿಕೊಳ್ಳುತ್ತದೆ. ಹಾಗಿದ್ದರೆ ತಡ ಏಕೆ ಇಂದಿನಿಂದಲೇ ನಿಮ್ಮ ಮಕ್ಕಳಿಗೆ ತುಪ್ಪದನ್ನವನ್ನು ಕೈತುತ್ತು ಮಾಡಿ ತಿನ್ನಿಸಿ, ಅವರ ಆರೋಗ್ಯವನ್ನು ರಕ್ಷಿಸಿಕೊಳ್ಳಿ.