ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ ಥಟ್ಟಂತ ಈ ಬ್ರೆಡ್ ಸ್ಯಾಂಡ್ ವಿಚ್ ಮಾಡಿಕೊಡಿ. ಮಕ್ಕಳಿಗೂ ಖುಷಿಯಾಗುತ್ತೆ. ನಿಮ್ಮ ಕೆಲಸನೂ ಸುಲಭವಾಗುತ್ತೆ.
ಬೇಕಾಗುವ ಸಾಮಾಗ್ರಿಗಳು-2 ಮೊಟ್ಟೆ, 2 ಪೀಸ್ ಬ್ರೆಡ್, ಚಿಟಿಕೆ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಚೀಸ್-1/2 ಕಪ್.
ಮಾಡುವ ವಿಧಾನ- ಮೊದಲಿಗೆ ಎರಡು ಮೊಟ್ಟೆಯನ್ನು ಒಡೆದು ಒಂದು ಬೌಲ್ ಗೆ ಹಾಕಿ ಅದಕ್ಕೆ ಚಿಟಿಕೆ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾಗುತ್ತಲೆ 1 ಟೀ ಸ್ಪೂನ್ ಎಣ್ಣೆ ಹಾಕಿ ಒಡೆದು ಇಟ್ಟುಕೊಂಡು ಮೊಟ್ಟೆ ಮಿಶ್ರಣವನ್ನು ಹಾಕಿ. ಗ್ಯಾಸ್ ಉರಿ ಕಡಿಮೆ ಇರಲಿ.
ನಂತರ ಈ ಮಿಶ್ರಣದ ಮೇಲೆ ಎರಡು ಪೀಸ್ ಅನ್ನು ಇಡಿ. ಬ್ರೇಡ್ ಪೀಸ್ ನ ಎರಡು ಬದಿ ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ. ನಂತರ ಆಮ್ಲೆಟ್ ಆಗುತ್ತಾ ಬರುತ್ತಲೆ ಅದನ್ನು ತಿರುವಿ ಹಾಕಿ. ಒಂದು ಬದಿಯ ಬ್ರೇಡ್ ಮೇಲೆ ಚೀಸ್ ಅನ್ನು ಇನ್ನೊಂದು ಬ್ರೇಡ್ ಪೀಸ್ ಅದರ ಮೇಲೆ ಬರುವಂತೆ ಮಡಚಿ ಹಾಕಿ ಚೀಸ್ ಕರಗುವವರೆಗೆ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಬ್ರೇಡ್ ಸ್ಯಾಂಡ್ ವಿಚ್ ರೆಡಿ.