ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅಂದರೆ ಎರಡರಿಂದ ಸುಮಾರು ಎಂಟು ವರ್ಷದ ತನಕ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬೇಕುು ಎಂಬುದು ಬಹುತೇಕ ಪೋಷಕರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಜಂಕ್ ಫುಡ್ ಬಹುವಾಗಿ ಇಷ್ಟಪಡುವ ಮಕ್ಕಳನ್ನು ಆರೋಗ್ಯಯುತ ಆಹಾರ ಸೇವಿಸುವಂತೆ ಮಾಡುವುದು ಹೇಗೆ?
ತರಕಾರಿಗಳೆಂದರೆ ಮಾರು ದೂರ ಹೋಗುವ ಮಕ್ಕಳಿಗಾಗಿ ಬಣ್ಣಬಣ್ಣದ ಸಲಾಡ್ ತಯಾರಿಸಿ. ಆಕರ್ಷಕ ವಿನ್ಯಾಸದಲ್ಲಿ ಕತ್ತರಿಸಿದ ಹಣ್ಣು ಅಥವಾ ತರಕಾರಿ ಮೇಲೆ ಚಿಟಿಕೆ ಉಪ್ಪು ಹಾಗೂ ಗರಂಮಸಾಲೆ ಪುಡಿ ಉದುರಿಸಿ. ಮಕ್ಕಳು ಇಷ್ಟ ಪಟ್ಟು ಸವಿಯುತ್ತಾರೆ.
ಅಡುಗೆ ಅಥವಾ ಸಾಂಬಾರಿನಲ್ಲಿ ಅವರಿಗಿಷ್ಟದ ತರಕಾರಿ ಜೊತೆ ಧಾನ್ಯಗಳನ್ನು ಬಳಸಿ. ಇದನ್ನು ಅವರಿಗೆ ಗೊತ್ತಾಗದಂತೆ ತಿನ್ನಿಸಬಹುದು.
ಯಾವುದೇ ತಿನಿಸು ತಯಾರಿಸಿದರೂ ಮಕ್ಕಳಿಗೆ ಆಕರ್ಷಣೀಯವಾಗಿ ಕಾಣುವಂತೆ ಅಲಂಕರಿಸಿ. ಆ ಮೋಹಕ್ಕಾದರೂ ಮಕ್ಕಳು ತರಕಾರಿ, ಹಣ್ಣು ತಿಂದಾರು.