ಮಕ್ಕಳು ಹೆಚ್ಚಾಗಿ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಚಾಕೊಲೇಟ್ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂದು ಪೋಷಕರು ನೀಡುವುದಿಲ್ಲ. ಆದರೆ ಚಾಕೊಲೇಟ್ ನ್ನು ಸರಿಯಾದ ವಯಸ್ಸಿನಲ್ಲಿ, ನಿಯಮಿತವಾಗಿ ಮಕ್ಕಳು ಸೇವಿಸಿದರೆ ಅದರಿಂದ ಈ ಪ್ರಯೋಜನ ಪಡೆಯಬಹುದು.
ಮಕ್ಕಳಿಗೆ ಒಂದು ವರ್ಷದ ತನಕ ಚಾಕೊಲೇಟ್ ನೀಡಬಾರದು. ಆನಂತರವೇ ಮಕ್ಕಳಿಗೆ ಚಾಕೊಲೇಟ್ ನೀಡಬಹುದು. ಆದರೆ ಅದರಿಂದ ಅವರಿಗೆ ಯಾವುದೇ ರೀತಿಯ ಅಲರ್ಜಿ ಉಂಟಾಗುವುದಿಲ್ಲ ಎಂಬುದನ್ನು ಗಮನಿಸಿ.
ಹಾಗೇ ಚಾಕೊಲೇಟ್ ತಿನ್ನುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ. ಜೀವಕೋಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕರಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ. ಚಾಕೊಲೇಟ್ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ.