ಇಂದಿನ ಒತ್ತಡದ ಯುಗದಲ್ಲಿ ಅರೋಗ್ಯದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ ಎಂಬುದು ಬಹುತೇಕರಿಗೆ ಮರೆತೇ ಹೋಗಿರುತ್ತದೆ. ಬಾಯಿಗೆ ರುಚಿಯಾಗುವ ವಸ್ತುಗಳನ್ನು ಸೇವಿಸುವ ಬದಲು ಅರೋಗ್ಯಕ್ಕೆ ಯಾವುದು ಉತ್ತಮವೋ ಅದನ್ನು ತಿನ್ನುವುದು ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇತ್ತೀಚೆಗೆ ಮಕ್ಕಳು ಸೇವಿಸುವ ಆಹಾರದಲ್ಲಿ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್ ಹಾಗೂ ವಿಟಮಿನ್ ಗಳು ಇರುವುದಿಲ್ಲ. ಮಕ್ಕಳ ಬಾಯಿಗೆ ಇಷ್ಟವಾಗುವ ಕುರುಕುಲು ತಿಂಡಿಗಳ ಜೊತೆ ಹಣ್ಣು ತರಕಾರಿ, ಮಾಂಸ, ಮೊಟ್ಟೆ, ಸೊಪ್ಪು ಹಾಗೂ ಒಣಹಣ್ಣುಗಳನ್ನು ತಿನ್ನಲು ಕೊಡಬೇಕು.
ಅತ್ಯಧಿಕ ಪೋಷಕಾಂಶ ಮತ್ತು ವಿಟಮಿನ್ ಇರುವ ಬಾದಾಮಿಯನ್ನು ನಿತ್ಯ ಮಕ್ಕಳಿಗೆ ತಿನ್ನಲು ಕೊಡಿ. ಅತಿ ಹೆಚ್ಚು ಪ್ರಮಾಣದ ಪೌಷ್ಟಿಕಾಂಶಗಳನ್ನು ಇದು ಪೂರೈಸುತ್ತದೆ. ಕೊಬ್ಬಿನ ಪ್ರಮಾಣ ಇದರಲ್ಲಿ ಕಡಿಮೆ ಇರುವುದರಿಂದ ಹಸಿಯಾಗಿಯೇ ಸೇವಿಸಬೇಕು.
ಪ್ರತಿನಿತ್ಯ ಒಂದು ಬಾದಾಮಿ ಸೇವಿಸುವುದರಿಂದ ಮಕ್ಕಳ ಮೆದುಳು ಆರೋಗ್ಯಕರವಾಗಿ ಕೆಲಸ ಮಾಡುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ. ಹೀಗಾಗಿ ನಿತ್ಯ ಮಕ್ಕಳಿಗೆ ಬಾದಾಮಿ ತಿನ್ನಿಸಿ. ಆದರೆ ನೆನಪಿರಲಿ, ಒಂದು ಅಥವಾ ಎರಡಕ್ಕಿಂತ ಹೆಚ್ಚು ಬೇಡ.