ಮಕ್ಕಳಿಗೆ ಕನಸು ಬೀಳುವುದು ಕೆಲವೊಮ್ಮೆ ಸಾಮಾನ್ಯವಾಗಿರಬಹುದು. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮಗು ಒಂದೇ ವಿಷಯದ ಕನಸು ನಿತ್ಯ ಬೀಳುತ್ತಿದೆ ಎಂದಾಗ ಆ ಬಗ್ಗೆ ತುಸು ಚಿಂತಿಸಬೇಕು.
ಮಗು ರಾತ್ರಿ ಎದ್ದು ಅತ್ತಾಗ ಅಥವಾ ಬೆಳಿಗ್ಗೆ ಎದ್ದು ಡಲ್ ಆಗಿದ್ದಾಗ ಕನಸಿನಲ್ಲಿ ಏನು ಬಂದಿತ್ತು ಎಂದು ವಿಚಾರಿಸಿ, ಅದಕ್ಕೆ ಕಾರಣ ಹುಡುಕಿ. ಹೆಚ್ಚಾಗಿ ಹಿಂದಿನ ದಿನದ ಚಟುವಟಿಕೆಗಳು ಇಲ್ಲವೇ ಟಿವಿಯಲ್ಲಿ ವೀಕ್ಷಿಸಿದ ಕೆಲವು ದೃಶ್ಯಗಳು ಕನಸಿನ ರೂಪದಲ್ಲಿ ಕಾಣಿಸಿಕೊಂಡಿರಬಹುದು. ಅದನ್ನು ಮಕ್ಕಳಿಗೆ ತಿಳಿಹೇಳಿ
ಕನಸಿನ ವ್ಯಾಪ್ತಿಯನ್ನು ವಿವರಿಸಿ. ಅದು ಎಂದೂ ನನಸಾಗುವುದಿಲ್ಲ ಎಂಬುದನ್ನು ನಿಮ್ಮ ಕೆಲವು ಉದಾಹರಣೆಗಳ ಸಹಿತ ವಿವರಿಸಿ. ಇನ್ನೊಂದು ದಿನ ಕನಸಿನಲ್ಲಿ ಹುಲಿ ಬಂದರೆ ಆಗ ನನ್ನನ್ನು ಕರಿ, ನಾನು ಅದರ ಜೊತೆ ಫೈಟ್ ಮಾಡಿ ಮತ್ತೆ ಕಾಡಿಗೆ ಹೋಗುವಂತೆ ಮಾಡುತ್ತೇನೆ ಎಂದು ಹೇಳಿ ನೋಡಿ. ಇದರಿಂದ ಹೆತ್ತವರ ಮೇಲೆ ವಿಶ್ವಾಸ ಮೂಡುವ ಜೊತೆ ಅನಗತ್ಯ ಭಯವೂ ಕಡಿಮೆಯಾಗುತ್ತದೆ.
ನಿತ್ಯ ಒಂದೇ ರೀತಿಯ ಕನಸು ಬಿದ್ದರೆ ಅದರ ಹಿಂದೆ ಏನಾದರೂ ಕಾರಣವಿದೆಯೇ ಎಂದು ಪರೀಕ್ಷಿಸಿ, ಶಾಲೆಯಲ್ಲಿ ಅಥವಾ ಮನೆಯಲ್ಲಿ ಮಗುವನ್ನು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಎಂದು ವಿಚಾರಿಸಿ. ಮಗುವಿನ ಕಾಳಜಿ ಮಾಡಿ.