alex Certify ಮಕ್ಕಳಿಗೆ ಉಳಿತಾಯದ ಪಾಠ ಹೇಳಿ ಕೊಡಲು ಇಲ್ಲಿದೆ ʼಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಉಳಿತಾಯದ ಪಾಠ ಹೇಳಿ ಕೊಡಲು ಇಲ್ಲಿದೆ ʼಟಿಪ್ಸ್ʼ

ಚಿಕ್ಕ ಮಕ್ಕಳಿಗೆ ಹಣದ ಮಹತ್ವದ ಬಗ್ಗೆ ಚಿಕ್ಕಂದಿನಿಂದಲೇ ತಿಳಿಸಿ ಹೇಳಬೇಕು. ಅಗತ್ಯ ಮತ್ತು ಕೋರಿಕೆಗಳ ನಡುವೆ ಎಷ್ಟು ವ್ಯತ್ಯಾಸ ಇದೆಯೋ ಅವರಿಗೆ ಅರ್ಥವಾಗುವಂತೆ ಸ್ಪಷ್ಟವಾಗಿ ವಿವರಿಸಬೇಕು.

ಊಟ-ತಿಂಡಿ, ಬಟ್ಟೆ, ಇರಲು ಒಂದು ಮನೆ ಇಂತಹವು ನಮ್ಮ ಪ್ರಾಥಮಿಕ ಮತ್ತು ಆದ್ಯ ಅವಶ್ಯಕತೆಗಳು. ಉಳಿದವು ನಂತರದ ಅವಶ್ಯಕತೆಗಳು ಎಂದವರಿಗೆ ತಿಳಿಯ ಹೇಳಬೇಕು. ನಮ್ಮ ಹಿರಿಯರು ನಮಗೆ ಹುಂಡಿಗಳಲ್ಲಿ ಹಣ ಸಂಗ್ರಹಿಸಿಡುವುದನ್ನು ಹೇಳಿಕೊಟ್ಟಿದ್ದಾರೆ. ಹಾಗೆ ನಾವು ನಮ್ಮ ಮಕ್ಕಳಿಗೆ ಹಣದ ಬೆಲೆ ಮತ್ತು ಮಹತ್ವವನ್ನು ಚಿಕ್ಕಂದಿನಿಂದಲೇ ಕಲಿಸಬೇಕು.

ಇನ್ನೂ ಚಿಕ್ಕ ಮಕ್ಕಳಾದರೆ ಅಂಗಡಿಯಲ್ಲಿ ದೊರೆಯುವ ವಿವಿಧ ರೀತಿಯ ಆಕರ್ಷಣೀಯ ಹುಂಡಿಗಳನ್ನು ತಂದು ಅವುಗಳಲ್ಲಿ ಹಣ ಉಳಿಸುವುದನ್ನು ಕಲಿಸಿಕೊಡಬೇಕು. ಸ್ವಲ್ಪ ದೊಡ್ಡ ಮಕ್ಕಳಾದರೆ ಅವರ ಹೆಸರಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆದು ಪ್ರತಿ ತಿಂಗಳು ಅವರ ಕೈಯಲ್ಲಿ ಹಣ ಬ್ಯಾಂಕಿಗೆ ಕಟ್ಟುವುದನ್ನು ಹೇಳಿಕೊಡಬೇಕು. ಈಗ ಬಹಳಷ್ಟು ಬ್ಯಾಂಕ್ ಗಳು ಮಕ್ಕಳಿಗೂ ಖಾತೆ ತೆಗೆಯುವ ಸೌಲಭ್ಯವನ್ನು ಕಲ್ಪಿಸಿದೆ.

ಮಕ್ಕಳು ಪ್ರತಿಯೊಂದು ವಿಷಯದಲ್ಲೂ ತಂದೆ-ತಾಯಿಂದಲೇ ಎಲ್ಲವನ್ನು ಕಲಿಯುತ್ತಾರೆ. ಬಹಳಷ್ಟು ಬಾರಿ ತಂದೆ-ತಾಯಿಯನ್ನು ಅನುಸರಿಸುತ್ತಾರೆ. ಆದ್ದರಿಂದ ಹಣ ಉಳಿಸುವ ವಿಷಯದಲ್ಲಿ ನೀವು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ. ತಿಂಗಳ ಪ್ರಾರಂಭದಲ್ಲಿ ಇರುವ ಹಣವನ್ನು ಖರ್ಚು ಮಾಡಿ ತಿಂಗಳ ಕೊನೆಯಲ್ಲಿ ಪತಿ-ಪತ್ನಿಯರು ಜಗಳ ಪ್ರಾರಂಭಿಸಿದರೆ ಅದರ ಪ್ರಭಾವ ಮಕ್ಕಳ ಮೇಲೆ ಆಗುತ್ತದೆ.

ಮಕ್ಕಳ ಕೈಗೆ ಹಣ ಕೊಡುವುದು ಒಳ್ಳೆಯದಲ್ಲ ಎಂದು ಬಹಳಷ್ಟು ಮಂದಿ ಹೇಳುತ್ತಾರೆ. ಆದರೆ ಅದರಲ್ಲಿ ನಿಜವಿಲ್ಲ. ಅವರಿಗೆ ಉಳಿತಾಯದ ಅಭ್ಯಾಸ ಮಾಡಬೇಕೆಂದರೂ, ಹಣದ ಮಹತ್ವ ತಿಳಿಸಿ ಹೇಳಬೇಕೆಂದರೂ ಅವರ ಕೈಗೆ ಸ್ವಲ್ಪ ಹಣವನ್ನಾದರೂ ಕೊಡಲೇಬೇಕು. ಹಾಗೆಯೇ ಅವರ ಅವಶ್ಯಕತೆಗಳಿಗೆ ಆ ಹಣವನ್ನು ಉಪಯೋಗಿಸಿಕೊಳ್ಳಬಹುದು ಎಂದು ಹೇಳಬೇಕು. ಸಣ್ಣ ಸಣ್ಣ ಕೆಲಸಗಳನ್ನು ಅವರು ಮಾಡಿಕೊಟ್ಟ ನಂತರ ಕಾಣಿಕೆಯಾಗಿ ಅವರಿಗೆ ಸ್ವಲ್ಪ ಹಣ ಕೊಡಬೇಕು. ಹಾಗೆ ಮಾಡುವುದರಿಂದ ಮಕ್ಕಳಿಗೆ ಹಣದ ಮಹತ್ವ ಅದರ ಜೊತೆಗೆ ಕೆಲಸದ ಮಹತ್ವ ಕೂಡ ತಿಳಿಯುತ್ತದೆ.

ಮಕ್ಕಳ ಕೈಗೆ ಕೊಡುವ ಹಣವನ್ನು ಅವರು ಯಾವುದಕ್ಕೆ ಎಷ್ಟು ಹೇಗೆ ಖರ್ಚು ಮಾಡುತ್ತಾರೆ ಎನ್ನುವುದನ್ನು ಒಂದು ಪುಸ್ತಕದಲ್ಲಿ ಬರೆದಿಡಲು ಹೇಳಬೇಕು. ಅದರಿಂದ ಅನವಶ್ಯಕವಾದ ಖರ್ಚುಗಳು ಕೂಡ ತಿಳಿಯುತ್ತವೆ. ಅವರು ಹೆಚ್ಚು ಖರ್ಚು ಮಾಡಿಬಿಟ್ಟರೆ ಕೋಪ ಮಾಡಿಕೊಳ್ಳದೆ, ಬೈಯ್ಯದೆ, ಹೊಡೆಯದೆ ತಿಳಿ ಹೇಳಬೇಕು. ಮತ್ತೊಂದು ಬಾರಿ ಈ ರೀತಿಯ ತಪ್ಪು ಆಗದಂತೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...