ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಹೊಸ ರುಚಿ ಮಾಡಿಕೊಡುವುದಕ್ಕೆ ಹೇಳುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಬ್ರೌನಿ ಇದೆ. ಮಕ್ಕಳಿಗೆ ಮಾಡಿ ಕೊಡಿ ಇಷ್ಟಪಡುತ್ತಾರೆ.
ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 100 ಗ್ರಾಂ ನಷ್ಟು ಬೆಣ್ಣೆ ಹಾಕಿ. ನಂತರ 175 ಗ್ರಾಂ ನಷ್ಟು ಡಾರ್ಕ್ ಚಾಕೊಲೇಟ್ ಅನ್ನು ಚಿಕ್ಕ ಚಿಕ್ಕ ಪೀಸ್ ಮಾಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇವರೆಡು ಕರಗಿಸಿದ ನಂತರ ಗ್ಯಾಸ್ ಆಫ್ ಮಾಡಿ ಈ ಮಿಶ್ರಣ ತಣ್ಣಗಾಗಲು ಬಿಡಿ. ಇದಕ್ಕೆ 1 ಕಪ್ ಸಕ್ಕರೆ ಸೇರಿಸಿ 2 ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಟಿ-20 ವಿಶ್ವಕಪ್: ಸ್ಟುಡಿಯೋಗೆ ವಾಪಸ್ ಆದ ಈ ಆಟಗಾರನ ಪತ್ನಿ
ನಂತರ 1 ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, ½ ಕಪ್ ಮೈದಾ ಹಿಟ್ಟು, 2 ಟೇಬಲ್ ಸ್ಪೂನ್ ಕೋಕೊ ಪೌಡರ್, ½ ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೇಕಿಂಗ್ ಪ್ಯಾನ್ ಗೆ ಹಾಕಿ. ಇದರ ಮೇಲುಗಡೆ 10 ಸ್ಟ್ರಾಬೆರಿ ಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿಕೊಂಡು ಹಾಕಿ. ಒವನ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದು ತಣ್ಣಗಾದ ಮೇಲೆ ಕತ್ತರಿಸಿಕೊಂಡು ಸರ್ವ್ ಮಾಡಿ.