ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್ ಕೂಡ ಒಂದು. ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಬಹಳ ಸಿಹಿಯಾಗಿರುತ್ತೆ. ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ಕೇಕ್ ಗಿಂತ ಮನೆಯಲ್ಲಿ ಮಾಡುವ ಕೇಕ್ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲಿ ಬಾಳೆಹಣ್ಣು ಬಳಸಿ ಬನಾನಾ ಬ್ಲ್ಯೂಬೆರ್ರಿ ಕೇಕ್ ಸುಲಭವಾಗಿ ತಯಾರಿಸಿ.
ಬನಾನಾ ಬ್ಲ್ಯೂಬೆರ್ರಿ ಕೇಕ್ ಗೆ ಬೇಕಾಗುವ ಪದಾರ್ಥ:
ಮೂರು ಬಾಳೆಹಣ್ಣು, ಎರಡು ಮೊಟ್ಟೆ, 1/2 ಕಪ್ ಮೊಸರು, 1/3 ಕಪ್ ಜೇನುತುಪ್ಪ, ಒಂದು ಚಮಚ ವೆನಿಲಾ ಎಸೆನ್ಸ್, ಒಂದು ಚಮಚ ಬೇಕಿಂಗ್ ಸೋಡಾ, ಒಂದುವರೆ ಕಪ್ ಮೈದಾ, 1 ಕಪ್ ಬ್ಲ್ಯೂ ಬೆರ್ರಿ, ಒಂದು ಚಮಚ ತುಪ್ಪ.
ಬನಾನಾ ಬ್ಲ್ಯೂಬೆರ್ರಿ ಕೇಕ್ ಮಾಡುವ ವಿಧಾನ :
ಮೊದಲು ಬಾಳೆಹಣ್ಣನ್ನು ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಜೇನುತುಪ್ಪ, ಮೊಸರು, ವೆನಿಲಾ ಎಸೆನ್ಸ್, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಮೈದಾ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಬ್ಲ್ಯೂಬೆರ್ರಿ ಹಾಕಿ. ಮಿಶ್ರಣ ಗಂಟಾಗದಂತೆ ನೋಡಿಕೊಳ್ಳಿ.
ಬೇಕಿಂಗ್ ಟ್ರೇಗೆ ತುಪ್ಪ ಸವರಿ ಅದಕ್ಕೆ ಕೇಕ್ ಮಿಶ್ರಣವನ್ನು ಹಾಕಿ. 180 ಡಿಗ್ರಿಯಲ್ಲಿ 50 ನಿಮಿಷಗಳ ಕಾಲ ಮೈಕ್ರೊವೇವ್ ನಲ್ಲಿಡಿ. ನಂತ್ರ ಹೊರ ತೆಗೆದು ಐದು ನಿಮಿಷ ಹಾಗೆ ಬಿಡಿ. ನಂತ್ರ ಟ್ರೇಯನ್ನು ಉಲ್ಟಾ ಮಾಡಿ ಕೇಕನ್ನು ಬೇರೆ ಪ್ಲೇಟ್ ಗೆ ಹಾಕಿ. ನಂತ್ರ ಕತ್ತರಿಸಿ ಸರ್ವ್ ಮಾಡಿ.