ಮಕ್ಕಳಿದ್ದರೆ ಮನೆಯಲ್ಲಿ ಏನಾದರೂ ತಿಂಡಿಗೆ ಬೇಡಿಕೆ ಇಡುತ್ತಲೆ ಇರುತ್ತಾರೆ. ಅವರ ಮನಸ್ಸನ್ನು ಖುಷಿಪಡಿಸಲು ಈ ದಾಳಿಂಬೆ ಜೆಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
ದಾಳಿಂಬೆ ಜ್ಯೂಸ್ – 2 ಕಪ್, ಸಕ್ಕರೆ – 1/4 ಕಪ್, ಜೆಲಾಟಿನ್ – 1 ಟೇಬಲ್ ಸ್ಪೂನ್, ನೀರು – 4 ಟೇಬಲ್ ಸ್ಪೂನ್, ದಾಳಿಂಬೆ ಬೀಜ – 1/4 ಕಪ್.
ಮಾಡುವ ವಿಧಾನ:
ಒಂದು ಪ್ಯಾನ್ ಇಟ್ಟು ಅದಕ್ಕೆ ಜಿಲಾಟಿನ್ ಹಾಕಿ ನಂತರ ನೀರು ಸೇರಿಸಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಜಿಲಾಟಿನ್ ಕರಗುವವರೆಗೆ ತುಸು ಬಿಸಿ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ದಾಳಿಂಬೆ ಜ್ಯೂಸ್, ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದು ಬಿಸಿ ಇರುವಾಗಲೇ ಒಂದು ಮೌಲ್ಡ್ ಗೆ ಹಾಕಿ ಇದರ ಮೇಲೆ ದಾಳಿಂಬೆ ಬೀಜ ಉದುರಿಸಿ ಫ್ರಿಡ್ಜ್ ನಲ್ಲಿ ರಾತ್ರಿಯಿಡೀ ಇಡಿ. ನಂತರ ಮೌಲ್ಡ್ ನಿಂದ ತೆಗೆದು ಸರ್ವ್ ಮಾಡಿ.