ಕುಕ್ಕೀಸ್ ಅಂದರೆ ಮಕ್ಕಳಿಗೆ ತುಂಬಾ ಇಷ್ಟ. ಹಾಗಾಗಿ ಮಕ್ಕಳಿಗೆ ಈ ಕೋಕೊನಟ್ ಕುಕ್ಕೀಸ್ ಅನ್ನು ಮನೆಯಲ್ಲಿ ಮಾಡಿ ಕೊಡಿ. ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಸಕ್ಕರೆ ಪುಡಿ, ½ ಕಪ್ – ಬೆಣ್ಣೆ, ½ ಟೀ ಸ್ಪೂನ್ ಬೇಕಿಂಗ್ ಪೌಡರ್, ¾ ಕಪ್ – ಕೊಬ್ಬರಿ ತುರಿ, ¾ ಕಪ್ –ಗೋಧಿ ಹಿಟ್ಟು, 2 ಟೇಬಲ್ ಸ್ಪೂನ್ – ಕಾರ್ನ್ ಫ್ಲೋರ್, 2 ಟೇಬಲ್ ಸ್ಪೂನ್ – ಹಾಲು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಬೆಣ್ಣೆ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಕ್ರೀಂನ ಹದಕ್ಕೆ ಬರಲಿ. ಇದಕ್ಕೆ ಗೋಧಿ ಹಿಟ್ಟು, ಕಾರ್ನ್ ಫ್ಲೋರ್. ತೆಂಗಿನಕಾಯಿ ತುರಿ, ಬೇಕಿಂಗ್ ಪೌಡರ್, ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಒಂದು ಚಮಚದ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಉಂಡೆ ಕಟ್ಟಿ ಕೊಬ್ಬರಿ ತುರಿಯಲ್ಲಿ ಹೊರಳಾಡಿಸಿ. ಕೈಯಲ್ಲಿ ಈ ಉಂಡೆಯನ್ನು ನಿಧಾನಕ್ಕೆ ಒತ್ತಿಕೊಳ್ಳಿ.
ಕುಕ್ಕಿಸ್ ಟ್ರೇ ಗೆ ತುಪ್ಪ ಸವರಿ ಈ ಒತ್ತಿಕೊಂಡ ಕುಕ್ಕಿಸ್ ಅನ್ನು ಈ ಟ್ರೈ ನಲ್ಲಿಟ್ಟು ಒವನ್ ನಲ್ಲಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.