alex Certify ಮಕ್ಕಳಿಗೂ ಆಗುತ್ತೆ ಹೃದಯಾಘಾತ, ಈ ಲಕ್ಷಣಗಳ ಬಗ್ಗೆ ಹೆತ್ತವರಿಗಿರಲಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೂ ಆಗುತ್ತೆ ಹೃದಯಾಘಾತ, ಈ ಲಕ್ಷಣಗಳ ಬಗ್ಗೆ ಹೆತ್ತವರಿಗಿರಲಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಚಟುವಟಿಕೆಯೇ ಇಲ್ಲದ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯದ ಸಮಸ್ಯೆಗಳಿಗೆ ಕಾರಣ. ಹೃದಯದ ಸಮಸ್ಯೆ ವಯಸ್ಸಾದವರಿಗೆ ಮಾತ್ರ ಬರುತ್ತದೆ ಎಂಬ ನಿಯಮಿಲ್ಲ.

ಕೆಲವರಿಗೆ ಹುಟ್ಟಿನಿಂದಲೇ ತೊಂದರೆ ಬರಬಹುದು. ಅದರಲ್ಲೂ ಮಕ್ಕಳಿಗೆ ಈ ಸಮಸ್ಯೆ ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.ಅಮೆರಿಕದ ಮಿಚಿಗನ್‌ನಲ್ಲಿ ಮ್ಯಾಕ್ಸ್ ವೀಗಲ್ ಎಂಬ ಮಗುವಿಗೆ ಹುಟ್ಟಿನಿಂದಲೇ 2 ಬಗೆಯ ಹೃದಯ ಸಂಬಂಧಿ ಕಾಯಿಲೆಗಳಿತ್ತು. ಈ ಮಗು ಎಎಸ್‌ಡಿ ಎಂಬ ಖಾಯಿಲೆಗೆ ತುತ್ತಾಗಿತ್ತು. ಜೊತೆಗೆ ಹೃದಯದ ಎಡ ಕುಹರದ ವೈಫಲ್ಯವೂ ಇತ್ತು.

ಇದನ್ನು ‘ಲೆಫ್ಟ್ ವೆಂಟ್ರಿಕ್ಯುಲರ್ ನಾನ್-ಕಾಂಪ್ಯಾಕ್ಷನ್ ಕಾರ್ಡಿಯೊಮಿಯೋಪತಿ’ ಎಂದು ಕರೆಯಲಾಗುತ್ತದೆ. 2019 ರಲ್ಲಿ ಮಗು ಶಸ್ತ್ರ ಚಿಕಿತ್ಸೆಗೆ ಒಳಗಾಗಿತ್ತು, ಆಗ ಮಗುವಿಗೆ ಕೇವಲ 4 ವರ್ಷ. ಆಪರೇಷನ್‌ ನಂತರವೂ ಮಗುವಿಗೆ ಬೇರೆ ಬೇರೆ ತೆರನಾದ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಪಾರ್ಶ್ವವಾಯುವಿಗೆ ತುತ್ತಾಗಿರುವುದು ಗೊತ್ತಾಯಿತು. ಈ ಕಾರಣದಿಂದಾಗಿ ಆತನ ದೇಹದ ಒಂದು ಭಾಗ ಕೆಲಸ ಮಾಡುವುದನ್ನು ನಿಲ್ಲಿಸಿತು.

ನಂತರ ಮಗುವಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯ್ತು. ಅದು ಯಶಸ್ವಿಯಾಗಿದ್ದು, ಆತನಿಗೀಗ 7 ವರ್ಷ. ‘ಏಟ್ರಿಯಾಲ್ ಸೆಪ್ಟಲ್ ಡಿಫೆಕ್ಟ್ಸ್‌’ ಹೆಸರಿನ ಕಾಯಿಲೆ ಅಂದರೆ ಎಎಸ್ ಡಿ, ಮಕ್ಕಳು ಹುಟ್ಟಿದಾಗಿನಿಂದ ಆರಂಭವಾಗುತ್ತದೆ, ಆರಂಭಿಕ ಹಂತದಲ್ಲಿ ಪತ್ತೆಯಾದರೆ ಸರಿಯಾದ ಚಿಕಿತ್ಸೆ ಸಾಧ್ಯ. ವಾಸ್ತವವಾಗಿ ನಮ್ಮ ಹೃದಯವು 4 ಕೋಣೆಗಳನ್ನು ಮತ್ತು ಒಂದೇ ಕವಾಟವನ್ನು ಹೊಂದಿದೆ. ಅವುಗಳು ಪರಸ್ಪರ ಸಂಪರ್ಕ ಹೊಂದಿವೆ.

ಹೃದಯದ ಮೇಲಿನ ಕೋಣೆಯ ಗೋಡೆಯಲ್ಲಿ ರಂಧ್ರವಿದ್ದರೆ ಅದನ್ನು ASD ಎಂದು ಕರೆಯಲಾಗುತ್ತದೆ. ಆ ರಂಧ್ರದಿಂದಾಗಿ ಎರಡೂ ಕೋಣೆಗಳಲ್ಲಿ ಇರುವ ರಕ್ತವು ಪರಸ್ಪರ ಬೆರೆಯಲು ಪ್ರಾರಂಭಿಸುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಆದಾಗ್ಯೂ, ಶಸ್ತ್ರಚಿಕಿತ್ಸೆಯ ಸಹಾಯದಿಂದ ರಂಧ್ರವನ್ನು ಮುಚ್ಚಬಹುದು. ASD  ಆರಂಭಿಕ ಲಕ್ಷಣಗಳು ಕೆಲವರಲ್ಲಿ ಕಂಡು ಬರಬಹುದು. ಕೆಲವರಲ್ಲಿ ಯಾವುದೇ ಲಕ್ಷಣಗಳೇ ಇರುವುದಿಲ್ಲ.

ಆದರೂ ಕೆಲವೊಂದು ಅಂಶಗಳನ್ನು ಹೆತ್ತವರು ಗಮನಿಸುತ್ತಲೇ ಇರಬೇಕು. ಉಸಿರು ಕ್ಷೀಣಿಸುವುದು, ಬೇಗನೆ ಆಯಾಸವಾಗುವುದು, ಕಾಲು ಮತ್ತು ಹೊಟ್ಟೆಯಲ್ಲಿ ಊತ, ಅತಿ ವೇಗದ ಉಸಿರಾಟ, ನಿಂತು ನಿಂತು ಹೃದಯ ಬಡಿತ, ಹೃದಯದಿಂದ ಚಿತ್ರವಿಚಿತ್ರ ಶಬ್ಧ ಬರುವಿಕೆ ಇವೆಲ್ಲವೂ ಮಗುವಿನಲ್ಲಿ ಎಎಸ್‌ಡಿ ಸಮಸ್ಯೆ ಇದೆ ಎಂಬುದರ ಲಕ್ಷಣಗಳು. ಇವು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಿರಿ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...