
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಕ್ಕಳಾಗದ ಅನುಮಾನದ ಕಾರಣಕ್ಕೆ ರಾಹುಲ್ ಗಾಂಧಿ ಮದುವೆಯಾಗಿಲ್ಲ ಎಂಬ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದರ ಮಧ್ಯೆ ಚಲನಚಿತ್ರ ನಟ ಚೇತನ್ ಕುಮಾರ್, ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
‘ಮಕ್ಕಳಾಗದ ಕಾರಣ ರಾಹುಲ್ ಗಾಂಧಿ ಮದುವೆಯಾಗುತ್ತಿಲ್ಲ’ ಎಂದು ಬಿಜೆಪಿ ಸಂಸದ ಕಟೀಲ್ ಹೇಳಿಕೆ ನೀಡಿದ್ದಾರೆ
ಇದು ಅತ್ಯಂತ ಕೆಳಮಟ್ಟದ ಮತ್ತು ತಾರ್ಕಿಕವಾಗಿ ದೋಷಪೂರಿತ ಹೇಳಿಕೆಯಾಗಿದೆʼ ಎಂದು ಚೇತನ್ ಹೇಳಿದ್ದಾರೆ.
ರಾಗವು ‘ನಿಜವಾದ ಪುರುಷನಿಗಿಂತ ಕಡಿಮೆ’ ಎಂಬಂತಹ ಪುರುಷ ಪ್ರಧಾನದ ಪ್ರಚೋದನೆಯು ಹಿಮ್ಮೆಟಿಸುವಿಕೆ ಮತ್ತು ಅನುಚಿತವಾಗಿದೆ. ಎರಡನೆಯದಾಗಿ ಮದುವೆಯಾಗುವುದು ಮಕ್ಕಳನ್ನು ಹೊಂದುವುದಕ್ಕೆ ಎಂಬ ಅಗತ್ಯ ಇದೆಯೇ ? ಎಂದು ಚೇತನ್ ಪ್ರಶ್ನಿಸಿದ್ದಾರೆ.