alex Certify ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬಲಿಷ್ಠರಾಗಿಸುವುದು ಹೇಗೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬಲಿಷ್ಠರಾಗಿಸುವುದು ಹೇಗೆ….?

ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಿಜವಾಗಿ ಸವಾಲಿನ ಕೆಲಸ. ಈ ಕೆಳಗಿನ ಆಹಾರಗಳನ್ನು ಸೇವಿಸುವ ಮೂಲಕ ಚಳಿಗಾಲದಲ್ಲಿ ಮಕ್ಕಳನ್ನು ಅನಾರೋಗ್ಯದಿಂದ ದೂರವಿಡಬಹುದು.

ಮಕ್ಕಳು ಹಣ್ಣು ಮತ್ತು ತರಕಾರಿಗಳನ್ನು ಕಂಡಾಗ ದೂರ ಹೋಗುವುದು ಸಹಜ. ಅವರಿಗಿಷ್ಟವಾಗುವ ರೂಪದಲ್ಲಿ ಇವುಗಳನ್ನು ತಿನ್ನಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಪೇರಳೆ, ಕಿತ್ತಳೆ, ಪಪ್ಪಾಯಿ ಮತ್ತು ತರಕಾರಿಗಳಾದ ಕುಂಬಳಕಾಯಿ, ಈರುಳ್ಳಿ, ಕಡು ಹಸಿರು ಎಲೆಗಳ ತರಕಾರಿಗಳನ್ನು ಹೆಚ್ಚು ತಿನ್ನಿಸಿ.

ಮೊಸರು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ರಕ್ಷಣಾತ್ಮಕ, ಸೋಂಕು ನಿರೋಧಕ ಏಜೆಂಟ್ ಆಗಿ ಮೊಸರು ಕೆಲಸ ಮಾಡುತ್ತದೆ. ಇದು ಕ್ಯಾಲ್ಸಿಯಂ ಮತ್ತು ಹಲವಾರು ಇತರ ಪೋಷಕಾಂಶಗಳಿಂದ ತುಂಬಿದ್ದು ಇದು ಮೂಳೆಗಳು ಬಲವಾಗಲು ಸಹಾಯ ಮಾಡುತ್ತದೆ

ಪ್ರಾಣಿ ಮೂಲಗಳಿಂದ ಬರುವ ಪ್ರೋಟೀನ್‌ಗಳು ಸಾಕಷ್ಟು ಅಮೈನೊ ಆಮ್ಲಗಳನ್ನು ಹೊಂದಿರುತ್ತವೆ. ಅವು ಮೀನು, ಕೋಳಿ, ಮೊಟ್ಟೆ ಮತ್ತು ಹಾಲಿನಲ್ಲಿ ಕಂಡುಬರುತ್ತವೆ. ಸಸ್ಯಾಹಾರಿಗಳು ತಮ್ಮ ಪ್ರೋಟೀನ್ ಅನ್ನು ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳಾದ ಸೋಯಾಬೀನ್, ರಾಜ್ಮಾ, ಕಡಲೆಬೇಳೆ ಇತ್ಯಾದಿಗಳಲ್ಲಿ ಪಡೆಯಬಹುದು.

ವಾಲ್ ನಟ್ಸ್ ಮತ್ತು ಬಾದಾಮಿಯಲ್ಲಿ ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳಿದ್ದು ಇವು ನಿಮ್ಮ ದೇಹವು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಬೆಳ್ಳುಳ್ಳಿ, ಶುಂಠಿ ಮತ್ತು ಅರಿಶಿನವು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದು ದೇಹದೊಳಗಿನ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಶೀತ ಮತ್ತು ಜ್ವರ ರೋಗಲಕ್ಷಣಗಳನ್ನು ತಡೆಯಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...