ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಮಕ್ಕಳ ಸ್ಥೂಲಕಾಯತೆ ಅತ್ಯಂತ ಹೆಚ್ಚಾಗಿರುವುದು ಚೀನಾದಲ್ಲಿ. ನಂತರದ ಸ್ಥಾನದಲ್ಲಿ ಭಾರತವಿದೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 14.4 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಈ ಬಗ್ಗೆ ಯುನಿಸೆಫ್ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. 2030ರ ವೇಳೆಗೆ ಭಾರತದಲ್ಲಿ ಸ್ಥೂಲಕಾಯ ಹೊಂದಿರುವ ಮಕ್ಕಳ ಸಂಖ್ಯೆ 27 ಮಿಲಿಯನ್ ತಲುಪಬಹುದು.
ತಜ್ಞರ ಪ್ರಕಾರ, ಮಕ್ಕಳಲ್ಲಿ ಸ್ಥೂಲಕಾಯತೆಯು ಅನಿಯಂತ್ರಿತ ಆಹಾರ ಪದ್ಧತಿ ಮತ್ತು ಕಳಪೆ ಜೀವನಶೈಲಿಯಿಂದ ಉಂಟಾಗುತ್ತದೆ. ಮಕ್ಕಳ ತೂಕ ಅತಿಯಾಗಿದ್ದರೆ, ಬೊಜ್ಜು ಬಂದಿದ್ದರೆ ಕೂಡಲೇ ಅವರನ್ನು ಸಕ್ರಿಯಗೊಳಿಸಬೇಕು. ಈ ಯುಗದಲ್ಲಿ ಕ್ಯಾಲೋರಿಗಳು ಹೆಚ್ಚು ಖರ್ಚಾಗುತ್ತದೆ ಆದರೆ ಶಕ್ತಿಯ ಬಳಕೆ ಕಡಿಮೆ. ಮಕ್ಕಳ ತೂಕ ಹೆಚ್ಚಾಗಲು ಇದೇ ಕಾರಣ.
ಮಕ್ಕಳಲ್ಲಿ ಸ್ಥೂಲಕಾಯತೆಯಿಂದ ಮಧುಮೇಹ, ರಕ್ತದೊತ್ತಡ, ಅಸ್ಥಿಸಂಧಿವಾತ, ಪಿತ್ತಕೋಶದ ಸಮಸ್ಯೆ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಮಕ್ಕಳಲ್ಲಿ ಬೊಜ್ಜು ಕ್ಯಾನ್ಸರ್‌ಗೆ ಕೂಡ ಕಾರಣವಾಗಬಹುದು.
ವಯಸ್ಸಿಗೆ ತಕ್ಕಂತೆ ಎಷ್ಟಿರಬೇಕು ಮಕ್ಕಳ ತೂಕ?
ವಯಸ್ಸು ಹುಡುಗ ಹುಡುಗಿ
1 ವರ್ಷ 10.2 ಕೆಜಿ 9.5 ಕೆಜಿ
2 -5 ವರ್ಷ 12.3-16 ಕೆಜಿ 12-15 ಕೆಜಿ
3-5 ವರ್ಷ 14-17 ಕೆಜಿ 14-16 ಕೆಜಿ
5-8 ವರ್ಷ 20-25 ಕೆಜಿ 19-25 ಕೆಜಿ
9-11 ವರ್ಷ 28-32 ಕೆಜಿ 28-33 ಕೆಜಿ
12-14 ವರ್ಷ 37-47 ಕೆಜಿ 38-42 ಕೆಜಿ
15-18 ವರ್ಷ 58-65 ಕೆಜಿ 53-54 ಕೆಜಿ
ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ತಡೆಯುವುದು ಹೇಗೆ?
ಪೌಷ್ಟಿಕ ಆಹಾರದ ಜೊತೆಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಕೊಡಿ. ಜಂಕ್ ಫುಡ್, ಪಿಜ್ಜಾ-ಬರ್ಗರ್ ಮುಂತಾದ ವಸ್ತುಗಳಿಂದ ದೂರವಿರಿಸಿ. ಸಿಹಿ, ತಂಪು ಪಾನೀಯಗಳನ್ನು ಸೇವನೆಯನ್ನು ನಿಲ್ಲಿಸಿ. ವ್ಯಾಯಾಮ ಕೂಡ ತೂಕ ನಿಯಂತ್ರಣಕ್ಕೆ ಬಹಳ ಮುಖ್ಯ. ದೈಹಿಕ ಚಟುವಟಿಕೆಯನ್ನು ಕೂಡ ಹೆಚ್ಚಿಸಬೇಕು.