ಸುಡು ಬಿಸಿಲು, ಆಗಾಗ ಸುರಿಯುವ ಮಳೆ, ಗಾಳಿ ಹೀಗೆ ನಿರಂತರ ಬದಲಾವಣೆಗಳಿಂದ ಮಕ್ಕಳಲ್ಲಿ ಅನೇಕ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ನಾವು ಗಮನ ನೀಡಬೇಕು. ಮಗುವಿನ ರೋಗ ನಿರೋಧಕ ಶಕ್ತಿ ವಯಸ್ಕರಿಗಿಂತ ದುರ್ಬಲವಾಗಿರುತ್ತದೆ. ಆದ್ದರಿಂದ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಆರೋಗ್ಯಕರ ಉಪಹಾರ: ಮಗುವನ್ನು ಕಾಯಿಲೆಗಳಿಂದ ರಕ್ಷಿಸಬೇಕೆಂದು ನೀವು ಬಯಸಿದರೆ ಉತ್ತಮ ಆಹಾರ ಕೊಡುವುದು ಬಹಳ ಮುಖ್ಯ. ಮಗುವಿಗೆ ಎಣ್ಣೆಯುಕ್ತ ಪದಾರ್ಥಗಳನ್ನು ತಿನ್ನಿಸುವ ಬದಲು ಆರೋಗ್ಯಕರ ಆಹಾರವನ್ನು ಕೊಡಿ. ಹಣ್ಣುಗಳು, ಹಾಲು, ಮೊಟ್ಟೆ ಇವನ್ನೆಲ್ಲ ಅಭ್ಯಾಸ ಮಾಡಿಸಿ.
ಕಿತ್ತಳೆ : ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದೆ. ಕಿತ್ತಳೆ ಸೇವನೆಯಿಂದ ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ಮಕ್ಕಳ ದೇಹದಲ್ಲಿ ಬೆಳೆಯುತ್ತದೆ. ಹಾಗಾಗಿ ಮಕ್ಕಳಿಗೆ ಈ ಹಣ್ಣನ್ನು ತಿನ್ನಿಸಿ. ಬೇಕಿದ್ದರೆ ಕಿತ್ತಳೆ ಹಣ್ಣಿನ ರಸ ತೆಗೆದು ಕುಡಿಯಲು ಕೊಡಬಹುದು.
ದೈಹಿಕವಾಗಿ ಕ್ರಿಯಾಶೀಲರಾಗಿಡಿ: ಹಿಂದಿನ ಕಾಲದಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಟಿವಿಗಳು ಇರಲಿಲ್ಲ. ಮಕ್ಕಳು ಪ್ರತಿದಿನ ಮಕ್ಕಳು ಸಂಜೆ ಮೈದಾನದಲ್ಲಿ ಆಟವಾಡಲು ಹೋಗುತ್ತಿದ್ದರು. ಆದರೆ ಈಗ ಹೆಚ್ಚಿನ ಮಕ್ಕಳು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಅಂಟಿಕೊಳ್ಳುತ್ತಾರೆ. ದೈಹಿಕವಾಗಿ ಸಕ್ರಿಯವಾಗಿರುವುದಿಲ್ಲ. ಇದರಿಂದ ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಮತ್ತು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ.
ಸ್ವಚ್ಛತೆ: ಉತ್ತಮ ಆರೋಗ್ಯಕ್ಕೆ ಶುಚಿತ್ವ ಕೂಡ ಬಹಳ ಮುಖ್ಯ. ಕೈಗಳಿಂದ್ಲೇ ಅನೇಕ ಸೋಂಕು ದೇಹ ಸೇರಬಹುದು. ಆದ್ದರಿಂದ ಮಗು ಹೊರಗಿನಿಂದ ಮನೆಗೆ ಬಂದಾಗ ಸಾಬೂನಿನಿಂದ ತನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಈ ರೀತಿಯಾಗಿ ನೀವು ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.