
ಮಲಬದ್ಧತೆ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎನ್ನುಬಹುದು. ಇದರಿಂದ ಆ ಮಕ್ಕಳು ತುಂಬಾನೇ ನೋವು ಕೂಡ ಅನುಭವಿಸುತ್ತಾರೆ. ಮಕ್ಕಳಲ್ಲಿ ಕಾಡುವ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
5 ವರ್ಷದ ಮೇಲಿನ ಮಕ್ಕಳಿಗಾದರೆ 8-10 ಒಣದ್ರಾಕ್ಷಿಯನ್ನು 2 ಟೇಬಲ್ ಸ್ಪೂನ್ ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಇದನ್ನು ಚೆನ್ನಾಗಿ ಹಿಸುಕಿ ಸಿಪ್ಪೆ ಬೇರ್ಪಡಿಸಿ ಅದರ ರಸವನ್ನು ಮಕ್ಕಳಿಗೆ ಕುಡಿಸಿ.
ಹಾಗೇ 3 ಟೇಬಲ್ ಸ್ಪೂನ್ ನಷ್ಟು ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿಕೊಂಡು ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ ಮಕ್ಕಳಿಗೆ ಕೊಡಿ.
ಹಾಗೇ ಪುಟ್ಟಬಾಳೆ ಹಣ್ಣನ್ನು ದಿನಕ್ಕೆ ಒಂದು ಕೊಡಿ. ಬಿಸಿ ಬಿಸಿ ನೀರನ್ನು ಕುಡಿಸಿ. ನಾರಿನಾಂಶವಿರುವ ಆಹಾರವನ್ನು ಹೆಚ್ಚೆಚ್ಚು ಸೇವಿಸಲು ಕೊಡಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.