ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ಪರಿಣಾಮ ಮಕ್ಕಳು ಹೆಚ್ಚಾಗಿ ಕಿವಿನೋವಿಗೆ ತುತ್ತಾಗುತ್ತಾರೆ. ಕಿವಿಯಲ್ಲಿ ಸೋರುವ ದ್ರವವು ಕಿವಿ ಸೋಂಕನ್ನು ತಂದಿಡುತ್ತದೆ.
ನೋವಿನ ಪ್ರಮಾಣ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸುವುದೇ ಒಳ್ಳೆಯದು. ಇನ್ನೂ ಆರಂಭದ ಹಂತದಲ್ಲಿದ್ದಾಗ ನೈಸರ್ಗಿಕವಾದ ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.
ಬೆಳ್ಳುಳ್ಳಿಯಲ್ಲಿ ನೋವು ನಿವಾರಕ ಗುಣಗಳಿದ್ದು ಇದು ಕಿವಿ ಸೋಂಕನ್ನು ನಿಗ್ರಹಿಸುತ್ತದೆ. ಬೆಳ್ಳುಳ್ಳಿಯ ನಾಲ್ಕು ಎಸಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಪುಡಿ ಮಾಡಿದ ಲವಂಗ ಹಾಗೂ ಉಪ್ಪು ಸೇರಿಸಿ. ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ನೋವಿರುವ ಜಾಗದಲ್ಲಿಡಿ. ಇದರಿಂದ ನೋವು ಸಹಜವಾಗಿಯೇ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಎಣ್ಣೆಯೂ ಅತ್ಯುತ್ತಮ ಪರಿಣಾಮ ಬೀರುತ್ತದೆ. ಟೀ ಟ್ರೀ ಮರದ ಎಣ್ಣೆಯೂ ಆಂಟಿ ಬ್ಯಾಕ್ಟೀರಿಯಾ ಗುಣ ಹೊಂದಿದ್ದು ಕಿವಿ ಸೋಂಕಿಗೆ ಅದ್ಭುತ ಪರಿಹಾರವಾಗಿದೆ. ಇದರ ಕೆಲವು ಹನಿಗಳನ್ನು ಟೀ ಟ್ರೀ ಮರದ ಎಣ್ಣೆಯೊಂದಿಗೆ ಬೆರೆಸಿ ಬಿಸಿ ಮಾಡಿ. ಎರಡು ಹನಿಯನ್ನು ಕಿವಿಯೊಳಗೆ ಬಿಡಿ.
ಇದೇ ರೀತಿ ತುಳಸಿ ರಸಕ್ಕೆ ಎರಡು ಹನಿ ತೆಂಗಿನೆಣ್ಣೆ ಬೆರೆಸಿಯೂ ಕಿವಿಗೆ ಹಾಕಬಹುದು. ತುಳಸಿ ಎಲೆಗಳನ್ನು ಜಜ್ಜಿ ಪೇಸ್ಟ್ ತಯಾರಿಸಿ ಅದಕ್ಕೆ ಎರಡು ಹನಿ ತೆಂಗಿನೆಣ್ಣೆ ಹಾಕಿ ಕಿವಿಯ ಹೊರಭಾಗಕ್ಕೆ ಮತ್ತು ಒಳಕ್ಕೆ ಹಚ್ಚಿಕೊಳ್ಳಬಹುದು.