ಸಂಕ್ರಾಂತಿಯಂದು ಸೂರ್ಯ ದೇವನ ಪೂಜೆ ಮಾಡಬೇಕು. ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯದೇವ ಪ್ರವೇಶ ಮಾಡಿದ ದಿನವನ್ನು ಸಂಕ್ರಾಂತಿಯೆಂದು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯಿಂದ ಶುಭ ದಿನ ಶುರುವಾಗುತ್ತದೆ. ಈ ದಿನ ದಾನ, ಜಪ, ತರ್ಪಣಕ್ಕೆ ಬಹಳ ಮಹತ್ವವಿದೆ. ಈ ದಿನ ದಾನ ಮಾಡಿದ್ರೆ ಸಾವಿರ ಪಟ್ಟು ಫಲ ಸಿಗುತ್ತದೆ.
ಮಕರ ಸಂಕ್ರಾಂತಿಯಂದು ಪುಣ್ಯಕಾಲದಲ್ಲಿ ತೀರ್ಥ ಸ್ನಾನ ಅಥವಾ ನದಿಯಲ್ಲಿ ಸ್ನಾನ ಮಾಡಬೇಕು. ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದಿದ್ದಲ್ಲಿ ನೀರಿಗೆ ಎಳ್ಳು ಮಿಶ್ರಣ ಮಾಡಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ರೋಗ ನಿವಾರಣೆಯಾಗುವ ಜೊತೆಗೆ ಆರೋಗ್ಯ ಉತ್ತಮವಾಗಿರುತ್ತದೆ.
ಮಕರ ಸಂಕ್ರಾಂತಿಯಂದು ಹಿರಿಯರ ಆತ್ಮಕ್ಕೆ ಶಾಂತಿ ನೀಡಲು ತರ್ಪಣ ಬಿಡಿ. ನೀರಿಗೆ ಎಳ್ಳು ಬೆರೆಸಿ ತರ್ಪಣ ಬಿಡಿ. ಇಲ್ಲ ಎಳ್ಳಿನಲ್ಲಿ ಮಾಡಿದ ವಸ್ತುವನ್ನು ದಾನ ಮಾಡಿ. ಇದ್ರಿಂದ ಹಿರಿಯರು ಖುಷಿಯಾಗಿ ಆಶೀರ್ವಾದ ಮಾಡ್ತಾರೆ.