ಇನ್ನೇನು ಸಂಕ್ರಾಂತಿ ಬಂದೇ ಬಿಡ್ತು. ವರ್ಷದ ಮೊದಲ ಹಬ್ಬಕ್ಕೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ಹಬ್ಬದಂದು ಎಳ್ಳು-ಬೆಲ್ಲ ಒಟ್ಟಿಗೆ ಸೇವಿಸುವ ರೂಢಿ ಮೊದಲಿನಿಂದಲೂ ನಡೆದು ಬಂದಿದೆ. ಆದ್ರೆ ವೈಜ್ಞಾನಿಕವಾಗಿ ಇದರ ಪ್ರಯೋಜನ ಏನೆಂದು ನೋಡಿ….
ಡಿಸೆಂಬರ್-ಜನವರಿ ತಿಂಗಳು ಬಂತೆಂದರೆ ವಾತಾವರಣದಲ್ಲಿ ಚಳಿ ಏರುತ್ತಾ ಹೋಗುತ್ತದೆ. ಅಂತಹ ಸಮಯದಲ್ಲಿ ಚರ್ಮಕ್ಕೆ ಕೊಬ್ಬಿನ ಅಂಶದ ಅಗತ್ಯ ಹೆಚ್ಚು. ಚರ್ಮಕ್ಕೆ ಅಗತ್ಯವಿರುವ ಎಣ್ಣೆ ಹಾಗು ಪೋಷಕಾಂಶ ಒದಗಿಸುವಲ್ಲಿ ಎಳ್ಳು ಸಹಕಾರಿ. ಎಳ್ಳಿನ ಸೇವನೆ ಆರೋಗ್ಯಕ್ಕೆ ಪುಷ್ಟಿಯನ್ನು ನೀಡುತ್ತದೆ.
ಚಳಿಗಾಲದಲ್ಲಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಸ್ವಲ್ಪ ದುರ್ಬಲ. ದೇಹದ ಕೋಶಗಳಿಗೆ ಕೆಲಸ ಮಾಡಲು ಆಲಸ್ಯ ಬರುತ್ತದೆ. ದೇಹದ ಉಷ್ಣಾಂಶವನ್ನು ನಿರ್ವಹಣೆ ಮಾಡುವ ರಕ್ತ ಸಂಪನ್ಮೂಲವನ್ನು ಹೆಚ್ಚಿಸುವ ಆಹಾರ ಸೇವನೆ ಅಗತ್ಯ. ಅದಕ್ಕೆ ಬೆಲ್ಲವು ಸಹಾಯ ಮಾಡುತ್ತದೆ.
ಹಾಗಾಗಿ ಎಳ್ಳು-ಬೆಲ್ಲದ ಸೇವನೆ ಚಳಿಗಾಲದಲ್ಲಿ ಒಳ್ಳೆಯದು. ಎಲ್ಲಾ ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗಿ ರಕ್ತ ಹೀನತೆ ಸಮಸ್ಯೆಯನ್ನು ಹತೋಟಿಯಲ್ಲಿಡುತ್ತದೆ. ಚಳಿಗಾಲದಲ್ಲಿ ಕಾಡೋ ನೆಗಡಿ, ಕಫ, ಸಂದುನೋವು ಸಮಸ್ಯೆ ಹಾಗೂ ಶ್ವಾಸಕೋಶದ ಕಾರ್ಯ ಸರಾಗವಾಗಿ ನಡೆಯಲು ಎಳ್ಳು-ಬೆಲ್ಲ ಸೇವನೆ ಅನುಕೂಲಕಾರಿ.