ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಮಕರ ಸಂಕ್ರಾಂತಿಯಂದು ದಾನ ಮಾಡಿದ್ರೆ ವಿಶೇಷ ಫಲ ಸಿಗುತ್ತದೆ ಎಂದು ನಂಬಲಾಗಿದೆ. ರಾಶಿಗನುಗುಣವಾಗಿ ದಾನ ಮಾಡಿದ್ರೆ ಮತ್ತಷ್ಟು ಶುಭ ಫಲಗಳು ಲಭ್ಯವಾಗಲಿವೆ.
ಮೇಷ : ಮೇಷ ರಾಶಿಯವರು ಮಕರ ಸಂಕ್ರಾಂತಿಯಂದು ಎಳ್ಳನ್ನು ದಾನ ಮಾಡಿದ್ರೆ ಶೀಘ್ರ ಮನಸ್ಸಿನ ಇಚ್ಛೆ ಈಡೇರಲಿದೆ.
ವೃಷಭ : ಉಣ್ಣೆಯ ವಸ್ತ್ರ ಹಾಗೂ ಎಳ್ಳನ್ನು ಈ ರಾಶಿಯವರು ಮಕರ ಸಂಕ್ರಾಂತಿ ದಿನ ದಾನ ನೀಡಬೇಕು.
ಮಿಥುನ : ಈ ರಾಶಿಯವರು ಸೊಳ್ಳೆ ಪರದೆ ಅಥವಾ ಎಳ್ಳನ್ನು ದಾನ ಮಾಡಬೇಕು.
ಕರ್ಕ : ಎಳ್ಳು, ಸಾಬೂದಾನ್ ಹಾಗೂ ಉಣ್ಣೆಯ ಬಟ್ಟೆಯನ್ನು ದಾನದ ರೂಪದಲ್ಲಿ ನೀಡಬೇಕು.
ಸಿಂಹ : ಈ ರಾಶಿಯವರು ಕಂಬಳಿ ಹಾಗೂ ಎಳ್ಳನ್ನು ದಾನ ಮಾಡಬೇಕು.
ಕನ್ಯಾ : ಕನ್ಯಾ ರಾಶಿಯವರು ಎಣ್ಣೆ, ಎಳ್ಳು, ಹೊದಿಕೆ, ಉದ್ದಿನ ಬೇಳೆಯನ್ನು ದಾನದ ರೂಪದಲ್ಲಿ ನೀಡಬೇಕು.
ತುಲಾ : ಎಣ್ಣೆ, ಹತ್ತಿ ಬಟ್ಟೆ, ಸೊಳ್ಳೆ ಪರದೆಯನ್ನು ದಾನವಾಗಿ ನೀಡಬೇಕು.
ವೃಶ್ಚಿಕ : ಬಡವರಿಗೆ ಅಕ್ಕಿ ಹಾಗೂ ಕಿಚಡಿ ತಯಾರಿಸುವ ವಸ್ತುಗಳನ್ನು ನೀಡಬೇಕು.
ಧನು : ಈ ರಾಶಿಯವರು ಮಕರ ಸಂಕ್ರಾಂತಿಯಂದು ಎಳ್ಳು ಹಾಗೂ ಧಾನ್ಯವನ್ನು ದಾನ ಮಾಡಬೇಕು.
ಮಕರ : ಎಣ್ಣೆ, ಎಳ್ಳು, ಹೊದಿಕೆ, ಪುಸ್ತಕವನ್ನು ದೇಣಿಗೆ ರೂಪದಲ್ಲಿ ನೀಡಬೇಕು.
ಕುಂಭ : ಎಳ್ಳು, ಸಾಬೂದಾನ್, ಬಟ್ಟೆ, ಹೊದಿಕೆಯನ್ನು ದಾನ ನೀಡಬೇಕು.
ಮೀನ : ಈ ರಾಶಿಯವರು ಎಳ್ಳು, ಬೇಳೆ, ಸಾಬೂದಾನ್, ಹೊದಿಕೆ, ಸೊಳ್ಳೆ ಪರದೆಯನ್ನು ದಾನ ನೀಡಬೇಕು.