ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬೆದರಿಕೆ ಹಾಕುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಇದೀಗ ಆರ್.ಎಸ್.ಎಸ್. ಮುಖಂಡರನ್ನು ಭೇಟಿಯಾಗುವ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
BIG NEWS: ಮಾಜಿ ಕಾರ್ಪೊರೇಟರ್ ಹತ್ಯೆಗೆ ಕುಟುಂಬದಿಂದಲೇ ನಡೆದಿತ್ತು ಡೀಲ್…!
ಉತ್ತರ ಪ್ರಾಂತದ ಆರ್.ಎಸ್.ಎಸ್. ಸಂಚಾಲಕ ಅರವಿಂದರಾವ್ ದೇಶಪಾಂಡೆ ಮನೆಗೆ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದು, ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಚಿವ ಸ್ಥಾನಕ್ಕಾಗಿ ಆರ್.ಎಸ್.ಎಸ್. ಮುಖಂಡರ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಲಸಿಕೆ ಪಡೆದವರಿಗೆ ಗುಡ್ ನ್ಯೂಸ್: ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್ ಪರಿಣಾಮಕಾರಿ
ಒಂದೆಡೆ ರಾಜಕೀಯದಿಂದಲೇ ನಿವೃತ್ತಿ ಬಗ್ಗೆ ಚಿಂತನೆ ಮಾತನಾಡುತ್ತಿರುವುದಾಗಿ ಹೇಳುತ್ತಿರುವ ರಮೇಶ್ ಜಾರಕಿಹೊಳಿ ಮತ್ತೊಂದೆಡೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಭೇಟಿ, ನಿನ್ನೆಯಷ್ಟೇ ಸುತ್ತೂರು ಶ್ರೀಗಳ ಭೇಟಿ ಮೂಲಕ ಪರೋಕ್ಷವಾಗಿ ಮಂತ್ರಿ ಸ್ಥಾನಕ್ಕಾಗಿ ಒತ್ತಡ ತಂತ್ರ ಹೆಣೆದಿದ್ದು, ಇದೀಗ ಆರ್.ಎಸ್.ಎಸ್. ನಾಯಕರ ಮೂಲಕವೂ ಸಚಿವ ಸ್ಥಾನ ಮರಳಿ ಪಡೆಯುವ ಬಗ್ಗೆ ಕಸರತ್ತು ಆರಂಭಿಸಿದ್ದಾರೆ.