ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅವಘಡ ಸಂಭವಿಸಿದ್ದು, 250 ವರ್ಷ ಇತಿಹಾಸವಿರುವ ಮರವೊಂದು ಏಕಾಏಕಿ ಧರಾಶಾಹಿಯಾಗಿರುವ ಘಟನೆ ನಡೆದಿದೆ.
ಮಠದ ಪ್ರಾಂಗಣದಲ್ಲಿದ್ದ ಮರ ಇದಾಗಿದ್ದು, ಪೀಠಾಧಿಪತಿಗಳು ಹಾಗೂ ಭಕ್ತರಿಂದ ಪ್ರತಿದಿನ ಪೂಜಿಸಲ್ಪಡುತ್ತಿದ್ದ 250 ವರ್ಷಗಳಷ್ಟು ಪುರಾತನವಾದ ಶಮಿವೃಕ್ಷವಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಉರುಳಿ ಬಿದ್ದಿದೆ.
ಮರ ಬಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಭಕ್ತರು ಇರಲಿಲ್ಲ, ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಭಕ್ತರು ಹಾಗೂ ಮಠದ ಸಿಬ್ಬಂದಿಗಳ ಸಹಾಯದಿಂದ ಮರವನ್ನು ತೆರವುಗೊಳಿಸಲಾಗಿದೆ. ಶಮಿವೃಕ್ಷ ಶಕ್ತಿ ಸ್ವರೂಪಿಣಿ, ವಿಜಯದ ಸಂಕೇತವಾಗಿದ್ದು ಶತಮಾನಗಳಿಂದ ಪೂಜಿಸಲ್ಪಡುತ್ತಿದ್ದ ಮರ ಇದ್ದಕಿದ್ದಂತೆ ಬುಡಮೇಲಾಗಿ ಉರುಳಿಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.