ಯಾವುದೇ ಒಂದು ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಪೋಸ್ಟರ್ಗಳನ್ನು ಹಾಕುವುದು ಸಾಮಾನ್ಯ ಸಂಗತಿ. ಇದೇ ರೀತಿ ಮಂಡ್ಯದಲ್ಲಿ ಹಾಕಿರುವ ಪೋಸ್ಟರ್ ಒಂದು ಅದರ ವಿಚಾರಕ್ಕಾಗಿ ಎಲ್ಲರ ಗಮನ ಸೆಳೆಯುತ್ತಿದೆ.
‘ಬ್ರಹ್ಮಚಾರಿಗಳ ನಡೆ – ಮಹದೇಶ್ವರ ಬೆಟ್ಟದ ಕಡೆ’ ಹೆಸರಿನಲ್ಲಿ ಪಾದಯಾತ್ರೆ ಆಯೋಜಿಸಲಾಗಿದ್ದು, ಇದರ ಪೋಸ್ಟರ್ಗಳನ್ನು ಹಾಕಲಾಗಿದೆ. ಕೆ ಎಂ ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಒಟ್ಟು 122 ಕಿಲೋಮೀಟರ್ ಪಾದಯಾತ್ರೆ ಮಾಡುವುದಾಗಿ ಇದರಲ್ಲಿ ತಿಳಿಸಲಾಗಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಷರತ್ತುಗಳನ್ನು ಸಹ ವಿಧಿಸಲಾಗಿದ್ದು, ಕಡ್ಡಾಯವಾಗಿ ಅವರು 30 ವರ್ಷ ಮೇಲ್ಪಟ್ಟಿರಬೇಕಂತೆ. ಅಲ್ಲದೆ ವಿವಾಹಿತರಿಗೆ ಯಾವುದೇ ಕಾರಣಕ್ಕೂ ಇದರಲ್ಲಿ ಅವಕಾಶವಿರುವುದಿಲ್ಲ. ಜೊತೆಗೆ ಪ್ರತಿ ಐದು ಕಿಲೋಮೀಟರ್ ಗೆ ಟೀ ಬ್ರೇಕ್ ಹಾಗೂ 10 ಕಿ.ಮೀ. ಗೆ ಸ್ನ್ಯಾಕ್ ವ್ಯವಸ್ಥೆ ಇರಲಿದೆಯಂತೆ.