ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು.
ಮೆಂತ್ಯಕಾಳಿಗೆ ಸಮ ಪ್ರಮಾಣದ ಜೀರಿಗೆ ಹಾಕಿ ಅರ್ಧ ಚಮಚ ಕಾಳು ಮೆಣಸು ಸೇರಿಸಿ ಪುಡಿ ಮಾಡಿಡಿ. ಇದನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡಿ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಪುಡಿ ಹಾಕಿ ಚೆನ್ನಾಗಿ ಕಲಸಿ ಕುಡಿಯಿರಿ.
ಒಂದು ತಿಂಗಳು ಇದನ್ನು ನಿರಂತರ ಕುಡಿದರೆ ನಿಮ್ಮ ಮೊಣಕಾಲಿನ ನೋವು ಸಮಸ್ಯೆ ಮಾಯವಾಗುತ್ತದೆ.
ಈ ನೀರಿನಲ್ಲಿ ಕಬ್ಬಿಣಾಂಶ ಮತ್ತು ಅಧಿಕ ಪ್ರಮಾಣದ ಪೋಷಕಾಂಶಗಳಿದ್ದು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಗಂಟು ನೋವನ್ನು ಕಡಿಮೆ ಮಾಡುತ್ತದೆ.
ಇದರೊಂದಿಗೆ ನಿಯಮಿತ ವಾಕಿಂಗ್, ಆರೋಗ್ಯಕರ ಆಹಾರ ಸೇವನೆಯೂ ಬಹಳ ಮುಖ್ಯ. ತಾಜಾ ಹಣ್ಣುಗಳನ್ನು ಹಾಗೂ ಡ್ರೈ ಫ್ರುಟ್ಸ್ ಗಳನ್ನು ಸೇವಿಸುವುದರಿಂದ ನಿಮ್ಮ ಮೂಳೆ ಗಟ್ಟಿಯಾಗುತ್ತದೆ. ತರಕಾರಿಗಳು ದೇಹಕ್ಕೆ ಬೇಕಿರುವ ವಿಟಮಿನ್ ಗಳನ್ನು ಒದಗಿಸುತ್ತವೆ. ಜಂಕ್ ಫುಡ್ ನಿಂದ ದೂರವಿದ್ದಷ್ಟು ನಿಮ್ಮ ಆರೋಗ್ಯ ಒಳ್ಳೆಯದಿರುತ್ತದೆ.