ವಯಸ್ಸಾದಂತೆ ಜನರು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಇದರಿಂದ ನಡೆಯಲು, ಕುಳಿತುಕೊಳ್ಳಲು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹರಳೆಣ್ಣೆಯಿಂದ ಪರಿಹಾರ ಮಾಡಿಕೊಳ್ಳಿ. ಹರಳೆಣ್ಣೆ ಚರ್ಮ ಮತ್ತು ಕೂದಲಿಗೆ ಮಾತ್ರವಲ್ಲ ಮೂಳೆಗಳ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಒಂದು ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ಬಳಿಕ ಆ ಬಟ್ಟೆಯನ್ನು ಮೊಣಕಾಲಿನ ಮೇಲೆ ಕಟ್ಟಿಕೊಳ್ಳಿ. ಅದರ ಮೇಲೆ ಹರಳೆಣ್ಣೆಯನ್ನು ಹಾಕಿ. ಇದನ್ನು 8ಗಂಟೆಗಳ ಕಾಲ ಹಾಗೇ ಬಿಡಿ. ಹಾಗೇ ಅದರ ಗಿಡದ ಎಲೆಗಳ ಪೇಸ್ಟ್ ತಯಾರಿಸಿ ಮೊಣಕಾಲಿಗೆ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
ಹರಳೆಣ್ಣೆ ಲಿಂಪೋಸೈಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ಲಿಂಪೋಸೈಟ್ ಗಳು ಉರಿಯೂತದ ಗುಣಗಳನ್ನು ಹೊಂದಿವೆ. ಇದರಿಂದ ನೋವು ನಿವಾರಣೆಯಾಗುತ್ತದೆ. ಮತ್ತು ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.