ಪ್ರಯಾಣವನ್ನು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಪ್ರವಾಸ ಕೊಂಚ ಇಂಟ್ರೆಸ್ಟಿಂಗ್ ಆಗಿದ್ದರೆ ಸಖತ್ ಖುಷಿ ಕೊಡುತ್ತದೆ. ಕೆಲವರಿಗಂತೂ ರೋಡ್ ಟ್ರಿಪ್ ಮಾಡುವುದು ನೆಚ್ಚಿನ ಹವ್ಯಾಸ. ಇದಕ್ಕೆ ತಕ್ಕಂತೆ ಕಳೆದ ಕೆಲವು ವರ್ಷಗಳಲ್ಲಿ ಭಾರತದ ರಸ್ತೆಗಳು ಸಾಕಷ್ಟು ಸುಧಾರಿಸಿವೆ. ಉತ್ತಮ ರಸ್ತೆಗಳು ಅಭಿವೃದ್ಧಿ ಹೊಂದಿದ ದೇಶದ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಸ್ತೆಗಳು ಹದಗೆಟ್ಟರೆ ನಿಮಿಷಗಳ ಪ್ರಯಾಣ ಗಂಟೆಗಳನ್ನೇ ತೆಗೆದುಕೊಳ್ಳಬಹುದು.
ಭಾರತದ ಅತಿ ಉದ್ದದ ಹೆದ್ದಾರಿ ಅಂದ್ರೆ NH-44. ಇದು 37,454 ಕಿಲೋಮೀಟರ್ ಉದ್ದವಾಗಿದೆ. ಈ ಹೆದ್ದಾರಿಯು ಕನ್ಯಾಕುಮಾರಿಯಿಂದ ಶ್ರೀನಗರಕ್ಕೆ ಹೋಗುತ್ತದೆ. 14 ದೇಶಗಳನ್ನು ಒಳಗೊಳ್ಳುವ ವಿಶಿಷ್ಟ ಹೆದ್ದಾರಿಯೊಂದಿದೆ. ಇದರ ಹೆಸರು ಪ್ಯಾನ್ ಅಮೇರಿಕನ್ ಎಕ್ಸ್‌ಪ್ರೆಸ್ ಹೈವೇ. ಉತ್ತರ ಅಮೆರಿಕಾದಿಂದ ಪ್ರಾರಂಭವಾಗಿ ಈ ಹೈವೇ ಮೂಲಕ 14 ದೇಶಗಳನ್ನು ದಾಟಬಹುದು. ಇದು ಅರ್ಜೆಂಟೀನಾದಲ್ಲಿ ಕೊನೆಗೊಳ್ಳುತ್ತದೆ. ಅತಿ ಉದ್ದದ ಹೈವೇ ಎಂಬ ಕಾರಣಕ್ಕೆ ಇದು ಗಿನ್ನಿಸ್ ದಾಖಲೆಗೂ ಪಾತ್ರವಾಗಿದೆ.
ಈ ಹೆದ್ದಾರಿಯನ್ನು ನಿರ್ಮಿಸುವ ಆಲೋಚನೆ ಬಂದಿದ್ದು 1923 ರಲ್ಲಿ. 14 ದೇಶಗಳು ಜೊತೆಯಾಗಿ ಇದನ್ನು ನಿರ್ಮಿಸಿವೆ. ಅರ್ಜೆಂಟೀನಾ, ಕೆನಡಾ, ಚಿಲಿ, ಕೊಲಂಬಿಯಾ, ಎಲ್ ಸಾಲ್ವಡಾರ್, ಬೊಲಿವಿಯಾ, ಗ್ವಾಟೆಮಾಲಾ, ಹೊಂಡುರಾಸ್, ಮೆಕ್ಸಿಕೋ, ಅಮೆರಿಕ , ನಿಕರಾಗುವಾ, ಪನಾಮ ಮತ್ತು ಕೋಸ್ಟರಿಕಾ ಪೆರು ಈ ದೇಶಗಳು ಹೆದ್ದಾರಿ ನಿರ್ಮಾಣಕ್ಕೆ ಕೈಜೋಡಿಸಿವೆ. ಈ ಹೆದ್ದಾರಿಯು 30 ಸಾವಿರ ಕಿಲೋಮೀಟರ್‌ಗಳಷ್ಟು ಉದ್ದವಾಗಿದೆ. ಮಧ್ಯೆ ಯಾವುದೇ ರೀತಿಯ ಬ್ರೇಕ್ ಇಲ್ಲ. ಆದರೆ ಇಲ್ಲಿ ಪ್ರಯಾಣ ಅಷ್ಟು ಸುಲಭವಲ್ಲ. ಇದರಲ್ಲಿ ಸುಮಾರು 110 ಕಿಲೋಮೀಟರ್ ಇನ್ನೂ ಅಪೂರ್ಣವಾಗಿದೆ.
ಡೇರಿಯನ್ ಗ್ಯಾಪ್‌ನ ಈ ಭಾಗದಲ್ಲಿ ಡ್ರಗ್ಸ್ ದಂಧೆ, ಅಪಹರಣ, ಕಳ್ಳಸಾಗಣೆ ನಡೆಯುತ್ತದೆ. ಈ ಹೆದ್ದಾರಿಯಲ್ಲಿ ಹೊರಟಾಗ ಹಿಮಭರಿತ ಪ್ರದೇಶ, ದಟ್ಟ ಅರಣ್ಯ ಮತ್ತು ಮರುಭೂಮಿ ಪ್ರದೇಶ ಕಾಣಸಿಗುತ್ತದೆ. ಅದನ್ನು ಸಂಪೂರ್ಣವಾಗಿ ದಾಟಲು ಹಲವಾರು ತಿಂಗಳುಗಳೇ ಬೇಕು. ನೀವು ಪ್ರತಿದಿನ 500 ಕಿಲೋಮೀಟರ್ ಸಾಗಿದರೂ ಪೂರ್ತಿಗೊಳಿಸಲು 60 ದಿನಗಳು ಬೇಕಾಗುತ್ತದೆ. ಕಲೋರ್ಸ್ ಸಾಂತಾಮಾರಿಯಾ ಎಂಬ ಸೈಕ್ಲಿಸ್ಟ್ ಈ ಹೆದ್ದಾರಿಯನ್ನು ದಾಟಲು 117 ದಿನಗಳನ್ನು ತೆಗೆದುಕೊಂಡರು. ಅವರ ಹೆಸರು ಇಂದಿಗೂ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಈ ಹೆದ್ದಾರಿಗೆ ಒಂದೇ ಮಾರ್ಗವಿಲ್ಲ. ಎಲ್ಲಾ ಮಾರ್ಗಗಳನ್ನು ಸೇರಿಸಿದರೆ ಉದ್ದ 48000 ಕಿ.ಮೀ.
ನೀವು ದಕ್ಷಿಣ ಮತ್ತು ಉತ್ತರ ಅಮೆರಿಕದ ಎರಡು ರಾಜಧಾನಿಗಳ ನಡುವೆ ಪ್ರಯಾಣಿಸುತ್ತಿದ್ದರೆ, ಹೆದ್ದಾರಿಯಲ್ಲಿ ಬರುತ್ತೀರಿ. ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಸುಲಭವಲ್ಲ. ತಜ್ಞರು ಮಾತ್ರ ಇಲ್ಲಿ ಚಾಲನೆ ಮಾಡಬಹುದು. ಇಲ್ಲಿ ಪ್ರಯಾಣಿಸಲು ಹಲವು ತಿಂಗಳುಗಳ ಕಾಲ ತಯಾರಿ ನಡೆಸುತ್ತಾರೆ. ಬೈಕ್ ಮತ್ತು ಕಾರಿನಲ್ಲಿ ಪ್ರಯಾಣಿಸುವ ಮೊದಲು ಎಲ್ಲಾ ರೀತಿಯ ಉಪಕರಣಗಳನ್ನು ಹೊಂದಿರಬೇಕು. ವಾಹನವು ಪಂಕ್ಚರ್ ಆದರೆ ಅಥವಾ ಕೆಟ್ಟುಹೋದರೆ ಈ ಹೆದ್ದಾರಿಯಲ್ಲಿ ಮೆಕ್ಯಾನಿಕ್ ಕೂಡ ಲಭ್ಯವಿಲ್ಲ. ಹಾಗಾಗಿ ಅತಿ ಉದ್ದದ ಈ ಹೆದ್ದಾರಿಯನ್ನು ಕ್ರಮಿಸುವುದು ಸವಾಲೇ ಸರಿ.