ದೇವರ ದೇವ ಮಹಾದೇವನ ಹೆಸರು ಜಪಿಸ್ತಾ ಇದ್ದಂತೆ ಮಂಗಳನ ಸ್ಥಾನ ಸುಧಾರಿಸುತ್ತದೆ. ಜಾತಕದಲ್ಲಿ ಮಂಗಳದ ದೋಷವಿದ್ದರೆ ಜೀವನದ ಶಾಂತಿ ದೂರವಾಗುತ್ತದೆ. ಸಣ್ಣಪುಟ್ಟ ಮಾತಿನಿಂದಲೂ ವಿವಾದ ಶುರುವಾಗುತ್ತದೆ. ಕೆಲಸ, ವ್ಯವಹಾರ, ಸಂಬಂಧ ಎಲ್ಲದರಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೋರ್ಟ್ ಮೆಟ್ಟಿಲೇರುವವರೆಗೂ ಪರಿಸ್ಥಿತಿ ಬಿಗಡಾಯಿಸುವುದುಂಟು.
ಮಂಗಳ ಗ್ರಹವನ್ನು ಸೇನಾಪತಿಯೆಂದು ಪರಿಗಣಿಸಲಾಗಿದೆ. ಮಂಗಳ ಶಕ್ತಿ, ಆತ್ಮವಿಶ್ವಾಸ, ಪರಾಕ್ರಮದ ಮಾಲೀಕ. ಮಂಗಳನ ಮುಖ್ಯ ಬಣ್ಣ ಕೆಂಪು. ಧಾತು ತಾಮ್ರವಾಗಿದ್ದರೆ ಧಾನ್ಯ ಬಾರ್ಲಿ. ಮೇಷ ಹಾಗೂ ವೃಶ್ಚಿಕ ಮಂಗಳನ ರಾಶಿ. ಮಕರ ರಾಶಿಯಲ್ಲಿ ಪ್ರಬಲವಾಗಿರುವ ಮಂಗಳ ಕರ್ಕ ರಾಶಿಯಲ್ಲಿ ದುರ್ಬಲನಾಗಿರುತ್ತಾನೆ.
ಮಂಗಳನ ಕಾರಣದಿಂದ ಸ್ವಭಾವದಲ್ಲಿ ಬದಲಾವಣೆಯಾದಲ್ಲಿ ಪ್ರತಿದಿನ ಬೆಳಿಗ್ಗೆ ಕೆಂಪು ಬಣ್ಣದ ಹೂವನ್ನು ಶಿವನಿಗೆ ಅರ್ಪಿಸಿ. ಕೆಂಪು ಪೀಠದ ಮೇಲೆ ಕುಳಿತು ಶಿವನಾಮ ಜಪ ಮಾಡಿ.
ಆತ್ಮವಿಶ್ವಾಸ, ಶಕ್ತಿ ಹಾಗೂ ಧೈರ್ಯದ ಸಮಸ್ಯೆಯಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ಕೆಂಪು ಬಟ್ಟೆ ತೊಟ್ಟು ಶಿವನ ಮುಂದೆ ಕುಳಿತುಕೊಳ್ಳಿ. ನಂತ್ರ ಸುವಾಸನೆಯುಕ್ತ ಧೂಪವನ್ನು ಶಿವನಿಗೆ ಬೆಳಗಿ. ಶಿವತಾಂಡವ ಸ್ತೋತ್ರವನ್ನು ಪಠಿಸಿ.
ಆಸ್ತಿ, ಮನೆ, ನೆಲದ ಸಮಸ್ಯೆ ಕಾಡಿದಲ್ಲಿ ಮಂಗಳವಾರ ಬೆಳಿಗ್ಗೆ ಶಿವನ ದೇವಾಲಯಕ್ಕೆ ಹೋಗಿ. ಬೆಲ್ಲಮಿಶ್ರಿತ ನೀರನ್ನು ಶಿವನಿಗೆ ಅರ್ಪಿಸಿ. ಸಂಪತ್ತಿಗಾಗಿ ಶಿವನಲ್ಲಿ ಪ್ರಾರ್ಥನೆ ಮಾಡಿ.
ಜೈಲಿಗೆ ಹೋಗುವ ಪರಿಸ್ಥಿತಿ ಎದುರಾದಲ್ಲಿ ಪ್ರತಿದಿನ ರಾತ್ರಿ ಸ್ನಾನ ಮಾಡಿ ಬಿಳಿ ಬಟ್ಟೆ ಧರಿಸಿ. ಚಂದ್ರನ ಬೆಳಕಿನಲ್ಲಿ ಕುಳಿತು ರುದ್ರಾಷ್ಠಕವನ್ನು ಜಪಿಸಿ. ಶಿವ-ಶಿವ ಎಂದು ಜಪ ಮಾಡಿದ್ರೂ ಫಲ ಲಭಿಸಲಿದೆ.
ವಿವಾಹದ ವಿಚಾರದಲ್ಲಿ ತೊಂದರೆ ಕಾಡುತ್ತಿದ್ದರೆ ಪ್ರತಿದಿನ ಬೆಳಿಗ್ಗೆ ಶಿವನಿಗೆ ಬಿಳಿ ಬಣ್ಣದ ಹಾಗೂ ಪಾರ್ವತಿಗೆ ಹಳದಿ ಬಣ್ಣದ ಹೂವನ್ನು ಅರ್ಪಿಸಿ. ಶಿವ-ಪಾರ್ವತಿ ಮುಂದೆ ತುಪ್ಪದ ದೀಪ ಹಚ್ಚಿ.