ದೇವತೆಗಳ ಸೇನಾಪತಿ ಮಂಗಳ ಎನ್ನಲಾಗುತ್ತದೆ. ಇದು ಶಕ್ತಿ ಗ್ರಹವಾಗಿದೆ. ಜಾತಕದಲ್ಲಿ ಮಂಗಳ ದುರ್ಬಲನಾದ್ರೆ ಅಂಥ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಕೊರತೆ ಕಾಡುತ್ತದೆ. ಯಶಸ್ಸು ಸಿಗುವುದಿಲ್ಲ. ಕೆಲಸ ಮಾಡುವ ಶಕ್ತಿಯನ್ನು, ಆಸಕ್ತಿಯನ್ನು ಕಳೆದುಕೊಳ್ತಾನೆ. ಮಂಗಳ ಗ್ರಹದೋಷವನ್ನು ಸರಿಪಡಿಸುವುದು ಬಹಳ ಮುಖ್ಯ. ಅದಕ್ಕಾಗಿ ಕೆಲ ಉಪಾಯಗಳನ್ನು ಅನುಸರಿಸಬೇಕು.
ಮಂಗಳವಾರ ಸುಂದರಾಕಂಡ ಅಥವಾ ಬಾಲಕಾಂಡವನ್ನು ಓದುವುದು ಬಹಳ ಒಳ್ಳೆಯದು. ಮಂಗಳ ಸೋತ್ರವನ್ನು ಪ್ರತಿ ದಿನ ಶ್ರದ್ಧೆಯಿಂದ ಓದಿದ್ರೆ ಮಂಗಳ ದೋಷ ನಿವಾರಣೆಯಾಗುತ್ತದೆ. ತಾಯಿ ಮಂಗಳಗೌರಿ ಆರಾಧನೆಯಿಂದಲೂ ಮಂಗಳ ದೋಷ ಕಡಿಮೆಯಾಗುತ್ತದೆ. ಕಾರ್ತಿಕೇಯನ ಪೂಜೆಯಿಂದಲೂ ಮಂಗಳ ದೋಷ ಕಡಿಮೆಯಾಗಿ ಲಾಭ ಪ್ರಾಪ್ತಿಯಾಗುತ್ತದೆ.
ಮಂಗಳ ದೋಷವುಳ್ಳವರು ಶಿವನ ಆರಾಧನೆ ಮಾಡಬೇಕು. ಜ್ಯೋತಿಷ್ಯರ ಸಲಹೆ ಪಡೆದು ಹವಳವನ್ನು ಧರಿಸಿ. ತಾಮ್ರ, ಚಿನ್ನ, ಗೋಧಿ, ಕೆಂಪು ಉಡುಪುಗಳು, ಕೆಂಪು ಶ್ರೀಗಂಧ, ಕೆಂಪು ಹೂವುಗಳು, ಕೇಸರಿ, ಕಸ್ತೂರಿ ದ್ವಿದಳ ಧಾನ್ಯಗಳು, ಭೂಮಿ ಇತ್ಯಾದಿಗಳ ದಾನ ಮಾಡಬೇಕು. ಮಂಗಳ ಯಂತ್ರದ ಪೂಜೆ ಮಾಡಬೇಕು.