ಬೇಕಾಗುವ ಸಾಮಾಗ್ರಿಗಳು:
ಮೈದಾ – 2 ಕಪ್, ಸಕ್ಕರೆ – 2.5 ಕಪ್, ತುಪ್ಪ – 2 ಟೀ ಸ್ಪೂನ್, ಏಲಕ್ಕಿ ಪುಡಿ – ಚಿಟಿಕೆ, ಉಪ್ಪು- ಸ್ವಲ್ಪ, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ತುಪ್ಪವನ್ನು ಚೆನ್ನಾಗಿ ಬಿಸಿ ಮಾಡಿ ಮೈದಾ ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ. ಜೊತೆಗೆ ಚಿಟಿಕೆ ಉಪ್ಪು, ಚಿಟಿಕೆ ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪನೇ ನೀರು ಸೇರಿಸಿ ಕಲಸಿಕೊಳ್ಳಿ. ಹಿಟ್ಟು ಪದರ ಪದರವಾಗಿ ಇರಬೇಕು. ನಂತರ ಸ್ವಲ್ಪ ನಾದಿಕೊಂಡು ನಿಂಬೆ ಗಾತ್ರದಷ್ಟು ದೊಡ್ಡ ಉಂಡೆ ಮಾಡಿ ಚಪ್ಪಟೆ ಮಾಡಬೇಕು. ನಂತರ ಬಾಣಲೆಯಲ್ಲಿ ಕರಿಯಲು ಎಣ್ಣೆ ಬಿಸಿ ಮಾಡಿ.
ಎಣ್ಣೆ ಬಿಸಿಯಾದ ಕೂಡಲೇ ಸಾಟ್ ನ್ನು ಚೆನ್ನಾಗಿ ಕರಿಯಿರಿ. ಮಧ್ಯಮ ಉರಿಯಲ್ಲಿಟ್ಟು ಎರಡೂ ಬದಿ ಚೆನ್ನಾಗಿ ಕರಿಯಿರಿ. ನಂತರ ಸಕ್ಕರೆ ಪಾಕ ಸಿದ್ಧತೆ ಮಾಡಿಕೊಳ್ಳಿ. 2ವರೆ ಕಪ್ ಸಕ್ಕರೆಗೆ ಒಂದುವರೆ ಕಪ್ ನೀರು ಹಾಕಿ ಪಾಕ ರೆಡಿ ಮಾಡಿ. ಒಂದೆಳೆ ಪಾಕ ಬಂದರೆ ಸಾಕು. ನಂತರ ತಣ್ಣಗಾಗಿರೋ ಕರಿದ ಸಾಟ್ ನ್ನು ಸಕ್ಕರೆ ಪಾಕಕ್ಕೆ ಹಾಕಿ ಮಿಕ್ಸ್ ಮಾಡಿ. ಒಂದೆರಡು ನಿಮಿಷಗಳ ನಂತರ ಸರ್ವಿಂಗ್ ಪ್ಲೇಟ್ ಗೆ ಎತ್ತಿಟ್ಟರೆ ಸವಿಯಲು ರುಚಿಯಾದ ಸಾಟ್ ರೆಡಿ.