ಹಿಂದೂ ಶಾಸ್ತ್ರಗಳಲ್ಲಿ ಮಂಗಳಸೂತ್ರ ಹಾಗೂ ಸಿಂಧೂರಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಇವೆರಡೂ ಸೌಭಾಗ್ಯದ ಸಂಕೇತ ಎನ್ನಲಾಗುತ್ತದೆ. ವಿವಾಹಿತ ಮಹಿಳೆ ಇಟ್ಟುಕೊಳ್ಳುವ ಸಿಂಧೂರದ ಗಾತ್ರ ಆಕೆ ಪತಿಯ ಆಯಸ್ಸನ್ನು ನಿರ್ಧರಿಸುತ್ತದೆ ಎಂಬ ನಂಬಿಕೆಯೂ ಇದೆ.
ವಿವಾಹಿತ ಮಹಿಳೆಯೊಬ್ಬಳು ಎಂದೂ ಬೇರೆ ವಿವಾಹಿತ ಮಹಿಳೆಯ ಸಿಂಧೂರ ಪಡೆದು ಹಚ್ಚಿಕೊಳ್ಳಬಾರದು. ಹಾಗೆ ತನ್ನ ಸಿಂಧೂರವನ್ನು ಯಾವುದೇ ಮಹಿಳೆ ಜೊತೆ ಹಂಚಿಕೊಳ್ಳಬಾರದು. ಸಿಂಧೂರವನ್ನು ಹಂಚಿಕೊಂಡ್ರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಸಿಂಧೂರವನ್ನು ಪತಿಯ ಆಯಸ್ಸಿಗೆ ಹೋಲಿಕೆ ಮಾಡಲಾಗುತ್ತದೆ. ಸಿಂಧೂರ ಹಚ್ಚಿಕೊಳ್ಳುವಾಗ ಮೂಗಿನ ಮೇಲೆ ಬಿದ್ರೆ ಅದನ್ನು ಅಳಿಸಬಾರದು. ಇದು ಅಪಶಕುನವೆನ್ನಲಾಗುತ್ತದೆ.
ಮಂಗಳಸೂತ್ರದಲ್ಲಿ ಕಪ್ಪು ಹಾಗೂ ಹಳದಿ ಮಣಿಗಳು ಇರಬೇಕು. ಈ ಎರಡೂ ಮಣಿಗಳು ವೈವಾಹಿಕ ಜೀವನವನ್ನು ರಕ್ಷಣೆ ಮಾಡುತ್ತವೆ.
ವಿವಾಹಿತ ಮಹಿಳೆ ಎಂದೂ ತನ್ನ ಮಂಗಳಸೂತ್ರವನ್ನು ತೆಗೆಯಬಾರದು. ಅಪ್ಪಿತಪ್ಪಿಯೂ ಅದನ್ನು ಬೇರೆ ಮಹಿಳೆಗೆ ಹಾಕಿಕೊಳ್ಳಲು ನೀಡಬಾರದು. ಇದು ಪತಿಗೆ ಹಾನಿಯುಂಟು ಮಾಡುತ್ತದೆ. ಮಂಗಳಸೂತ್ರ ಹರಿದ್ರೆ ತಕ್ಷಣ ಅದನ್ನು ಬದಲಿಸಿ. ಹೊಸ ಮಂಗಳಸೂತ್ರ ಹಾಕಿಕೊಳ್ಳುವ ವೇಳೆ ಹಳೆ ಮಂಗಳಸೂತ್ರವನ್ನು ನೀರಿನಲ್ಲಿ ಬಿಡಬೇಕು.