ವೈವಾಹಿಕ ಜೀವನದ ಶ್ರೇಷ್ಠ ಸಂಕೇತ ಮಂಗಳಸೂತ್ರ. ಇದು ಕಪ್ಪು ಮಣಿಗಳ ಸರ. ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿಕೊಳ್ತಾರೆ. ಮಂಗಳಸೂತ್ರ ಧಾರಣೆ ಮಾಡುವುದ್ರಿಂದ ಪತಿಯ ರಕ್ಷಣೆಯಾಗುತ್ತದೆ. ಪತಿಯ ಎಲ್ಲ ಸಂಕಟ ದೂರವಾಗುತ್ತದೆ ಎಂದು ನಂಬಲಾಗಿದೆ. ಇದು ಮಹಿಳೆಯರಿಗೂ ರಕ್ಷಾಕವಚ ಹಾಗೂ ಸಮೃದ್ಧಿಯ ಸಂಕೇತವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಮಂಗಳ ಸೂತ್ರದಲ್ಲಿ ಹಳದಿ ಅಥವಾ ಕೆಂಪು ದಾರವಿರುತ್ತದೆ. ಕಪ್ಪು ಮಣಿ (ಕರಿಮಣಿ)ಯಿರುತ್ತದೆ. ಇದ್ರ ಜೊತೆಗೆ ಬಂಗಾರ ಪದಕವಿರುತ್ತದೆ. ಮಂಗಳಸೂತ್ರದಲ್ಲಿ ಬಂಗಾರವಿರಲಿ ಬಿಡಲಿ ಹಳದಿ ದಾರ ಹಾಗೂ ಕರಿಮಣಿ ಇರಲೇಬೇಕು ಎನ್ನುತ್ತದೆ ಶಾಸ್ತ್ರ.
BIG NEWS: ರಣಾಂಗಣವಾದ ರೈತರ ಮುಖಂಡರ ಸಭೆ; ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆ
ಮಂಗಳ ಸೂತ್ರದ ಹಳದಿ ದಾರ ಹಾಗೂ ಪದಕ ಗುರು ಗ್ರಹದ ಸಂಕೇತ. ಮಹಿಳೆಯರ ಜಾತಕದಲ್ಲಿ ಗುರು ಗ್ರಹವನ್ನು ಇದು ಬಲಪಡಿಸುತ್ತದೆ. ಇದ್ರಲ್ಲಿರುವ ಕರಿಮಣಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಮಂಗಳಸೂತ್ರದ ಹಳದಿ ದಾರ ತಾಯಿ ಪಾರ್ವತಿ ಹಾಗೂ ಕರಿಮಣಿ ಭಗವಂತ ಶಿವ ಎಂದೂ ನಂಬಲಾಗಿದೆ.
ಶಿವನ ಕೃಪೆಯಿಂದ ಮಹಿಳೆ ಹಾಗೂ ಆಕೆ ಪತಿಯ ರಕ್ಷಣೆಯಾಗುತ್ತದೆ. ತಾಯಿ ಪಾರ್ವತಿ ಕೃಪೆಯಿಂದ ವೈವಾಹಿಕ ಜೀವನ ಸುಖವಾಗಿರುತ್ತದೆ.
ಮಂಗಳ ಸೂತ್ರವನ್ನು ಸ್ವಂತ ಖರೀದಿ ಮಾಡಿ, ಇಲ್ಲವೆ ಪತಿಯಿಂದ ಸ್ವೀಕರಿಸಿ. ಬೇರೆಯವರ ಅಥವಾ ಬೇರೆಯವರು ನೀಡಿದ ಮಂಗಳಸೂತ್ರವನ್ನು ಧರಿಸಬೇಡಿ. ಮಂಗಳಸೂತ್ರವನ್ನು ಮಂಗಳವಾರ ಖರೀದಿ ಮಾಡಬೇಡಿ. ಅಗತ್ಯವಿಲ್ಲವೆನ್ನಿಸಿದ್ರೆ ಮಂಗಳವಾರ ಮಂಗಳಸೂತ್ರವನ್ನು ತೆಗೆಯಬೇಡಿ.