ಎಲ್ಲರಿಗೂ ಜೀವನದಲ್ಲಿ ಮುಂದೆ ಬರಬೇಕು. ಸ್ಥಿತಿವಂತರಾಗಬೇಕು ಎಂಬ ಆಸೆ ಇರುತ್ತದೆ. ಅಂತವರು ತಾವು ಹುಟ್ಟಿದ ವಾರಕ್ಕೆ ಅನುಗುಣವಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿಯಾಗಿರಬಹುದು. ಮಂಗಳವಾರ ಹುಟ್ಟಿದವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಅವರ ಗುಣಲಕ್ಷಣಗಳೇನು ಎಂಬುದನ್ನು ತಿಳಿಯೋಣ.
ಈ ವಾರದ ಅಧಿಪತಿ ಮಂಗಳ. ಇವರಲ್ಲಿ ಹೋರಾಟದ ಛಲ ಜಾಸ್ತಿ. ಎಲ್ಲವನ್ನು ಎದುರಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಗುಣ ಇವರಲ್ಲಿದೆ.
ಇವರಲ್ಲಿ ಉತ್ಸಾಹ ಜಾಸ್ತಿ. ಯಾವುದೇ ಸವಾಲುಗಳು, ಕಷ್ಟಗಳನ್ನು ಎದುರಿಸುವಲ್ಲಿ ಇವರು ಹಿಂದೇಟು ಹಾಕುವುದಿಲ್ಲ. ಸಿಟ್ಟು, ಧೈರ್ಯ ಇವರಲ್ಲಿ ಹೆಚ್ಚು. ಇನ್ಯಾರದ್ದೋ ಟೀಕೆಗಳನ್ನು ಸುಲಭವಾಗಿ ತೆಗೆದುಕೊಳ್ಳುವ ಜಾಯಮಾನದವರಲ್ಲ. ಇದನ್ನೇ ಛಲವಾಗಿ ಸ್ವೀಕರಿಸಿಕೊಂಡು ಮುಂದೆ ಬರುವವರು. ಹಾಗಂತ ಇನ್ನೊಬ್ಬರ ಮೇಲೆ ಜಗಳಕ್ಕೆ ಹೋಗುವವರಲ್ಲ. ಸೋಲನ್ನೇ ಮೆಟ್ಟಿಲುಗಳಾಗಿ ಮಾಡಿಕೊಳ್ಳುವವರು.
ತಮ್ಮ ಜತೆ ಇರುವ ಸ್ನೇಹಿತರ ಕೈ ಬಿಡುವವರಲ್ಲ. ಇವರು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಬೇಗನೆ ಅಂದುಕೊಂಡಿದ್ದು ಆಗುತ್ತದೆ, ಹಾಗೇ ರಿಯಲ್ ಎಸ್ಟೇಟ್, ವ್ಯಾಪಾರದಲ್ಲಿ ತೊಡಗಿಕೊಂಡರೆ ಉನ್ನತ ಮಟ್ಟದ ಸ್ಥಾನಮಾನ ಗಳಿಸುತ್ತಾರೆ.
ಇನ್ನು ಸಂಗಾತಿಯನ್ನು ಹೆಚ್ಚು ಪ್ರೀತಿಸುವವರು ಹಾಗೇ ಕಾಳಜಿ ಮಾಡುವವರಾಗಿರುತ್ತಾರೆ. ಇನ್ನೊಬ್ಬರನ್ನು ಅರ್ಥಮಾಡಿಕೊಂಡು ನಡೆಯುವರಾಗಿರುತ್ತಾರೆ.