ಹಿಂದೂ ಧರ್ಮದ ಪ್ರತಿ ದಿನವನ್ನು ಒಂದೊಂದು ದೇವರಿಗೆ ಹಾಗೂ ಗ್ರಹಕ್ಕೆ ಅರ್ಪಿಸಲಾಗಿದೆ. ದಿನದ ಪ್ರಕಾರ ಕೆಲಸ ಮಾಡಿದ್ರೆ ಕೆಲಸ ಈಡೇರುತ್ತದೆ. ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ.
ಎಲ್ಲರಿಗೂ ತಿಳಿದಿರುವಂತೆ ಮಂಗಳವಾರವನ್ನು ಮಂಗಳ ಗ್ರಹ ಹಾಗೂ ಹನುಮಂತನಿಗೆ ಅರ್ಪಿಸಲಾಗಿದೆ. ಮಂಗಳವಾರದಂದು ಜಾತಕಕ್ಕೆ ಅಡ್ಡಿಯಾಗುವ ಯಾವುದೇ ಕೆಲಸವನ್ನು ಮಾಡಬಾರದು. ಜೀವನದಲ್ಲಿ ಅಡಚಣೆಯನ್ನುಂಟು ಮಾಡುವ ಕೆಲಸಕ್ಕೆ ಕೈ ಹಾಕಬಾರದು. ಮಂಗಳವಾರ ಮಾಡಿದ ತಪ್ಪು ಭವಿಷ್ಯದಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಮಂಗಳವಾರದ ದಿನ ಅಪ್ಪಿ ತಪ್ಪಿಯೂ ದಾನ ಮಾಡಬಾರದು. ಹಾಗೆ ದಾನವನ್ನು ನೀವು ಪಡೆಯಬಾರದು. ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಮಂಗಳವಾರ ಹನುಮಂತನ ದಿನವಾಗಿರುತ್ತದೆ. ಹಾಗಾಗಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮದ್ಯ, ಮಾಂಸದಿಂದ ದೂರವಿರಬೇಕು. ಭಗವಂತನ ಕೃಪೆಗೆ ಪಾತ್ರರಾಗಬೇಕೆಂದ್ರೆ ಗಡ್ಡ ತೆಗೆಯಬಾರದು. ಕೂದಲು ಕತ್ತರಿಸಬಾರದು. ಉಗುರನ್ನು ಕತ್ತರಿಸಬಾರದು. ಈ ದಿನ ಉಗುರು ಕತ್ತರಿಸಿದ್ರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.