ಇತ್ತೀಚಿನ ದಿನಗಳಲ್ಲಿ ವಿವಾಹ ಸಮಾರಂಭ ಅಂದರೆ ಅದ್ದೂರಿತನಕ್ಕೆ ಕಡಿಮೆಯಿಲ್ಲ. ಒಬ್ಬರಿಗಿಂತ ಒಬ್ಬರು ವೈಭವೋಪೇತವಾಗಿ ಶ್ರೀಮಂತಿಕೆಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ.
ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭ ಸಂದರ್ಭವನ್ನು ಮಧುರ ನೆನಪಾಗಿಸಲು ವಿಶಿಷ್ಠ ರೀತಿಯಲ್ಲಿ, ಡಿಫ್ರೆಂಟ್ ಆಗಿ ಮದುವೆಯಾಗುವವನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಧು-ವರರು ಒಂದು ರೂಪಾಯಿ ಖರ್ಚೆ ಇಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.
ಬೇರೆಯವರ ವಿವಾಹಕ್ಕೆಂದು ಬಂದಿದ್ದ ಯುವಕ-ಯುವತಿ ಇಬ್ಬರೂ ತಾವು ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಯುವತಿಯ ಹಿಂದೆ ನಿಂತಿದ್ದ ಯುವಕನೊಬ್ಬ, ಮಂಗಳ ವಾದ್ಯ ಮೊಳಗುವುದನ್ನೇ ಕಾದು ಗಟ್ಟಿಮೇಳ ಬಾರಿಸುತ್ತಿದ್ದಂತೆ ತನ್ನ ಜೇಬಿನಲ್ಲಿದ್ದ ಮಾಂಗಲ್ಯವನ್ನು ಯುವತಿಗೆ ಕಟ್ಟಿದ್ದಾನೆ.
ಯುವಕ-ಯುವತಿ ಇಬ್ಬರೂ ಸಹಮತದಿಂದಲೇ ಹೀಗೊಂದು ರೀತಿಯಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೆಲವರು ಹುಡುಗಿಗೆ ಅರಿವಿಲ್ಲದಂತೆಯೇ ಹುಡುಗ ತಾಳಿ ಕಟ್ಟಿರಬಹುದು ಎಂದು ಅಭಿಪ್ರಾಯಪಡುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
https://youtu.be/ot5-J_l_FkI